ಪೇರಳೆ ಅಥವಾ ಸೀಬೆ ಹಣ್ಣು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು. ಕಡಿಮೆ ಬೆಲೆಗೆ ಸಿಗುವ ಈ ಹಣ್ಣುಗಳು ಸಿಹಿ ಮತ್ತು ಕಟುವಾದ ವಿಶಿಷ್ಟ ಪರಿಮಳವನ್ನು ಹೊಂದಿವೆ. ಪೋಷಕಾಂಶಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಈ ಹಣ್ಣನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ.
ಎಸ್, ಪೌಷ್ಟಿಕಾಂಶಭರಿತ ಹಣ್ಣುಗಳಲ್ಲಿ ಸೀಬೆಹಣ್ಣು ಸಹ ಪ್ರಮುಖವಾದದ್ದು. ಸೀಬೆಹಣ್ಣನ್ನು ಚೇಪೆಕಾಯಿ, ಪೇರಳೆಹಣ್ಣು ಎಂಬ ಹೆಸರುಗಳಲ್ಲೂ ಕರೆಯುತ್ತಾರೆ. ಮೇಲಿನ ಭಾಗ ಹಸಿರು ಬಣ್ಣ ಒಳಗಡೆ ಬಿಳಿಯಾಗಿ ಚಿಕ್ಕಚಿಕ್ಕ ಬೀಜಗಳಿಂದ ಕೂಡಿರುವ ಈ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿ ವಿಟಮಿನ್ ಬಿ, ವಿಟಮಿನ್ ಕೆ, NE, ಸೆಲೆನಿಯಮ್, ಸತು, ತಾಮ್ರ ಮತ್ತು ಮ್ಯಾಂಗನೀಸ್ ನಿಂದ ತುಂಬಿದೆ.
ಪೇರಳೆಹಣ್ಣಿನಲ್ಲೂ 80% ನೀರಿನಾಂಶವಿದ್ದು, ದೇಹ, ಚರ್ಮವನ್ನು ಹೈಡ್ರೇಟ್ ಮಾಡುವಲ್ಲಿ ಸಹಾಯ ಮಾಡುತ್ತದೆ. ಬಾಳೇಹಣ್ಣಿನಲ್ಲಿರುವ ಪೊಟ್ಯಾಸಿಯಂಗಿಂತ ಹೆಚ್ಚು ಪೊಟ್ಯಾಸಿಯಂ ಇದರಲ್ಲಿದೆ. ವಿಟಮಿನ್ ಸಿ, ಕೊಬ್ಬಿನಾಂಶ ಸೋಂಕುಗಳನ್ನು ತಡೆಯುವುದಕ್ಕೆ ಸಹಕಾರಿಯಾಗಿದೆ.
ಯಾರೆಲ್ಲಾ ಸೀಬೆಹಣ್ಣು ಸೇವಿಸಬಾರದು?
ಜೀರ್ಣಶಕ್ತಿ ಕಡಿಮೆ ಇರುವವರು ಸೇವಿಸಬಾರದು:
ಸೀಬೆಹಣ್ಣು ತಿಂದ ಮೇಲೆ ಉಬ್ಬರಿಕೆ, ವಾಕರಿಕೆ, ಹೊಟ್ಟೆ ನೋವು, ಅಸ್ವಸ್ಥತೆಯಂತಹ ಸಮಸ್ಯೆಗಳು ಕಾಣಿಸಿಕೊಂಡರೆ ಈ ಹಣ್ಣನ್ನು ತಿನ್ನುವುದನ್ನು ನಿಲ್ಲಿಸಬೇಕು.
ಅಲರ್ಜಿ ಇರುವವರು ಸೇವಿಸಬಾರದು:
ಅಟೊಪಿಕ್ ಡರ್ಮಟೈಟಿಸ್ ಎಂದೂ ಕರೆಯಲ್ಪಡುವ ಎಸ್ಜಿಮಾವು ತುರಿಕೆ, ಕೆಂಪು, ಶುಷ್ಕತೆ ಹಾಗೂ ಚರ್ಮದಲ್ಲಿ ಕಿರಿಕಿರಿ ಅನುಭವಿಸುವವರು ಪೇರಳೆಹಣ್ಣಿನಿಂದ ದೂರವಿದ್ದರೆ ಒಳ್ಳೆಯದು.
ಮಧುಮೇಹಿಗಳು:
ಮಧುಮೇಹಿಗಳಾಗಿದ್ದರೆ, ಸೀಬೆಹಣ್ಣಿನ ಕಡಿಮೆ ಗ್ಲೈಸೆಮಿಕ್ ಅಂಶದಿಂದ ಅದನ್ನು ತಿನ್ನುವುದನ್ನು ತಪ್ಪಿಸಬೇಕು. ಪೇರಳೆ ಮತ್ತು ಪೇರಳೆ ಎಲೆಯ ರಸವು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.ವೈದ್ಯರ ಸಲಹೆ ಪಡೆದು ಸೇವಿಸುವುದು ಉತ್ತಮ.
ಶಸ್ತ್ರಚಿಕಿತ್ಸೆಗೆ ಒಳಗಾದವರು:
ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಕನಿಷ್ಠ ಎರಡು ವಾರಗಳವರೆಗೆ ಸೀಬೆಹಣ್ಣನ್ನು ತಿನ್ನದೆ ಇದ್ದರೆ ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸೀಬೆಹಣ್ಣಿನಿಂದ ದೂರವಿರುವುದು ಒಳ್ಳೆಯದು.
ಗರ್ಭಿಣಿಯರು ಸೀಬೆಹಣ್ಣು ತಿನ್ನುವುದರಿಂದ ಗಂಟಲು ಕಿರಿಕಿರಿ, ಕೆಮ್ಮುನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಗರ್ಭದಲ್ಲಿರುವ ಮಗುವಿನ ಆರೋಗ್ಯ ಕೆಡುವ ಸಾಧ್ಯತೆಗಳಿವೆ. ಬಾಣಂತಿಯರು ಸಹ ಪೇರಳೆಹಣ್ಣನ್ನು ತಿಂದರೆ ಮಗು ಎದೆಹಾಲು ಕುಡಿಯುವುದರಿಂದ ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಇವೆ. ವೈದ್ಯರ ಸಲಹೆಯಂತೆ ಹಣ್ಣುಗಳನ್ನು ಸೇವಿಸುವುದು ಉತ್ತಮ.