ಸೆ. 26ರಂದು ಉಡಿ ತುಂಬುವ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನವರಾತ್ರಿ ಉತ್ಸವದ ಅಂಗವಾಗಿ ಮುಳಗುಂದ ನಾಕಾದ ಹತ್ತಿರವಿರುವ ಮರಾಠಾ ವಿದ್ಯಾವರ್ಧಕ ಸಂಘದ ಶ್ರೀ ಜಗದಂಬಾ ದೇವಸ್ಥಾನದಲ್ಲಿ ಸೆ. 26ರಂದು ಸಾಯಂಕಾಲ 6.30ಕ್ಕೆ ಹ.ಬ.ಫ. ಶ್ರೀ ರಮೇಶ ಮ. ಶೇಂಡ್ಗೆ ಇವರಿಂದ ಪುರಾಣ ಪ್ರವಚನ ನಡೆಯಲಿದೆ. ನಂತರ ಮಹಿಳಾ ಮಂಡಳದವರಿಂದ ದಾಂಡಿಯಾ ನೃತ್ಯ, ರಾತ್ರಿ 7.30ಕ್ಕೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಜರುಗುವುದು. ಮಹಾಪ್ರಸಾದ ಸೇವೆಯನ್ನು ಶ್ರೀ ಮೋಹನರಾವ್ ಯಲ್ಲಪ್ಪ ಗ್ವಾರಿ ಸಹೋದರರು ವಹಿಸಿಕೊಂಡಿದ್ದಾರೆ.

Advertisement

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು, ಮಹಿಳೆಯರು, ಭಕ್ತಾದಿಗಳು, ಅಧಿಕ ಸಂಖ್ಯೆಯಲ್ಲಿ ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕೆಂದು ಸಂಘದ ಅಧ್ಯಕ್ಷ ಅರುಣಕುಮಾರ ಬಿ. ಚವ್ಹಾಣ, ಗೌರವ ಕಾರ್ಯದರ್ಶಿ ಸುರೇಶ ಎಸ್. ಬೇಂದ್ರೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ನವರಾತ್ರಿ ಅಂಗವಾಗಿ ಶ್ರೀದೇವಿ ಪುರಾಣ ಪ್ರವಚನದ ನಂತರ ಭಕ್ತಾದಿಗಳಿಗೆ ನಿತ್ಯ ಪ್ರಸಾದ ವಿತರಣೆಯನ್ನು ಮಾಡುತ್ತಿರುವ ಸಮಾಜದ ಹಿರಿಯರಾದ ಪರಶುರಾಮ ಯಲ್ಲಪ್ಪ ಜಾಧವ, ಶಿವಾಜಿರಾವ ಪಾವನ, ಮಂಜುನಾಥ ಎನ್. ಮಾಣೆ ಮತ್ತು ಮಾರುತಿರಾವ ಆರ್. ಅರಳಿಕಟ್ಟಿ ಇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here