ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಆಚರಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡರ ಮಾತನಾಡಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಬೆಳೆದು ಬಂದ ಹಾದಿ ಹಾಗೂ ಸಂಘದ ಶ್ರೇಯಸ್ಸಿಗಾಗಿ ಶ್ರಮಿಸಿದ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ.ಎಂ. ಹಿರೇಮಠ, ಜಗನ್ನಾಥ್ ಭಾಂಡಗೆ, ವಿಜಯಕುಮಾರ್ ಗಡ್ಡಿ, ಅನಿಲ್ ಅಬ್ಬಿಗೇರಿ, ಸುರೇಶ ಮರಳಪ್ಪನವರ, ರಮೇಶ್ ಸಜ್ಜಗಾರ, ಅರವಿಂದ್ ಕೆಲೂರು, ರಾಚಯ್ಯ ಹೊಸಮಠ್, ನಿರ್ಮಲಾ ಕೊಳ್ಳಿ, ವಿಜಯಲಕ್ಷ್ಮಿ ಮಾನ್ವಿ, ರವಿ ಮಾನ್ವಿ, ಅಶ್ವಿನಿ ಜಗತಾಪ್, ಶಾರದಾ ಸಜ್ಜನ, ಅಕ್ಕಮ್ಮ ವಸ್ತ್ರದ, ಕಮಲಾಕ್ಷಿ ಗೊಂದಿ, ಜಯಶ್ರೀ ಅಣ್ಣಿಗೇರಿ, ಸ್ವಾತಿ ಅಕ್ಕಿ, ಸಾವಿತ್ರಿ ಪಾಟೀಲ, ರೇಖಾ ಬಂಗಾರ ಶೆಟ್ಟರ, ಅಪ್ಪಣ್ಣ ತೆಂಗಿನಕಾಯಿ, ಎಸ್ಪಿ ಚೌಡಿ, ಪ್ರೀತಿ ಶಿವಪ್ಪನಮಠ, ಶೆಕವ್ವ ಮಾಸರೆಡ್ಡಿ, ರೇಖಾ ಗೌಳಿ, ನಾಗರಾಜ್ ಗುರಿಕಾರ್, ಮೋಹನ್ ಕೋರಿ, ಶಂಕರ್ ವಾಲಿ ಮುಂತಾದವರಿದ್ದರು.
ಗದಗ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್ ಚಿತ್ತರಗಿ ನಿರೂಪಿಸಿದರು, ಶಂಕರ್ ಕಾಕಿ ವಂದಿಸಿದರು.