ವಿಜಯಸಾಕ್ಷಿ ಸುದ್ದಿ, ಮುಳಗುಂದ: ಅರಿವಿನ ಮಾರ್ಗ ತೋರುವವನೇ ಗುರು ಎಂದು ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಕೆ. ದ್ಯಾಮನಗೌಡರ ಹೇಳಿದರು.
ಅವರು ಪಟ್ಟಣದ ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಜರುಗಿದ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮಕ್ಕಳಿಗೆ ನಿತ್ಯ ಅರಿವಿನ ಮಾರ್ಗದಲ್ಲಿ ಸಾಗಲು ಗುರು ಒಂದಲ್ಲಾ ಒಂದು ಸಂದರ್ಭದಲ್ಲಿ ಹೇಳುತ್ತಾ ಬರುತ್ತಾರೆ. ಗುರುಗಳ ಅರಿವಿನ ಮಾತುಗಳು, ಮೌಲ್ಯಯುತವಾಗಿರುತ್ತವೆ. ಗುರುಗಳನ್ನು ಅನುಕರಣೆ ಮಾಡಿದಲ್ಲಿ ವಿದ್ಯಾರ್ಥಿಗಳು ಸುಂದರ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ಗುರುಗಳ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಸೋತ ಉದಾಹರಣೆಗಳೇ ಇಲ್ಲ ಎಂದರು.
ಡಾ. ಕಲ್ಲಯ್ಯ ಹಿರೇಮಠ ಮಾತನಾಡಿ ಬದುಕಿನುದ್ದಕ್ಕೂ ಭಾಷಾ ಕೌಶಲ್ಯ ಅಗತ್ಯವಾಗಿದ್ದು, ಓದುವುದು, ಬರೆಯುವುದು, ಮಾತನಾಡುವ ಕೌಶಲ್ಯಗಳು ಇಂದು ತುಂಬಾ ಅಗತ್ಯವಿದೆ ಎಂದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಆರ್.ಎಂ. ಕಲ್ಲನಗೌಡರ ವಹಿಸಿದ್ದರು. ಪ್ರಶಾಂತ ಹುಲಕುಂದ, ಅನುಪಮಾ, ನಾಗರಾಜ ಎ, ವಸಂತಕುಮಾರ ಕೆ, ವಿಠೋಭಾ ಮಾಲೋದಕರ ಇದ್ದರು.