ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮೀಣ ಭಾಗದ ಜನತೆಗೆ ಉತ್ತಮ ಸಾರಿಗೆ ಸೌಲಭ್ಯ ಸಿಗಬೇಕು ಎನ್ನುವ ಉದ್ದೇಶದಿಂದ ಶಾಸಕ ಜಿ.ಎಸ್. ಪಾಟೀಲರು, ಗದಗ ವಿಭಾಗಿಯ ಡಿಟಿಒ ಮತ್ತು ಅಧಿಕಾರಿಗಳ ಕಾಳಜಿಯಿಂದಾಗಿ ಬಸ್ ಸೌಲಭ್ಯ ಲಭ್ಯವಾಗಿರುವುದರಿಂದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಪ್ರಯಾಣ ಸುಲಭವಾಗಿದೆ ಎಂದು ಹಿರಿಯ ಮುಖಂಡ ರಾಮಣ್ಣ ಸೋಮಪ್ಪ ಮೇಗಲಮನಿ ಹೇಳಿದರು.
ಡಂಬಳ ಹೋಬಳಿಯ ಅತ್ತಿಕಟ್ಟಿ ಭಾಗದಲ್ಲಿ ಸಂಚಾರ ಪ್ರಾರಂಭಿಸಿದ ನೂತನ ಬಸ್ಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅತ್ತಿಕಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ನೂತನ ಬಸ್ ಸೇವೆಯಿಂದ ಅನೂಕೂಲಕರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಲಕ್ಷ್ಮೇಶ್ವರದಿಂದ ರಾತ್ರಿ 7.15ಕ್ಕೆ ಹೊರಟು ಸೊರಟೂರ ಮಾರ್ಗವಾಗಿ 9 ಗಂಟೆಗೆ ಅತ್ತಿಕಟ್ಟಿ ಗ್ರಾಮಕ್ಕೆ ತಲುಪಿ ರಾತ್ರಿ ವಸತಿ ಇರಲಿದೆ. ಮುಂಜಾನೆ 6.45 ಗಂಟೆಗೆ ಮರಳಿ ಸೊರಟೂರ ಮಾರ್ಗವಾಗಿ ಶಿರಹಟ್ಟಿ ತಲುಪಲಿದೆ. ಇನ್ನೊಂದು ಬಸ್ ಗದಗದಿಂದ ಮಧ್ಯಾಹ್ನ 3.30 ಗಂಟೆಗೆ ಹೊರಟು ಕದಾಂಪುರ ಮತ್ತು ಡೋಣಿ-ಡೋಣಿತಾಂಡ ಮಾರ್ಗವಾಗಿ 4.30ಕ್ಕೆ ಅತ್ತಿಕಟ್ಟಿ ಗ್ರಾಮಕ್ಕೆ ತಲುಪಿ ಮತ್ತೆ ಅದೇ ಮಾರ್ಗವಾಗಿ ಗದಗ ನಗರವನ್ನು ತಲುಪಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಡಿ.ಡಿ. ಮೋರನಾಳ, ರಮೇಶ ಹೈಗರ, ಗ್ರಾ.ಪಂ ಸದಸ್ಯ ರಮೇಶ ಪವಾರ, ಗ್ರಾ.ಪಂ ಉಪಾಧ್ಯಕ್ಷೆ ಶಾಂತವ್ವ ಹೈಗರ, ಸೋಮಶೇಖರ ಕಾರಭಾರಿ, ಸಕ್ಕುಭಾಯಿ ಕಾರಭಾರಿ, ರಾಮಪ್ಪ ಅದರಕಟ್ಟಿ, ಈರಪ್ಪ ಹಿತ್ತಲಮನಿ, ನಿಂಗಪ್ಪ ಮಳ್ಳನವರ, ರುದ್ರಗೌಡ ಪಾಟೀಲ, ಗುಡದಪ್ಪ ತೆಳಗಡೆ, ಮಾಂತೇಶ ಚವ್ಹಾಣ, ಅತ್ತಿಕಟ್ಟಿ ಗ್ರಾಮಸ್ಥರು ಇದ್ದರು.



