ಗುಣಮಟ್ಟದ ಆಹಾರದಿಂದ ಉತ್ತಮ ಆರೋಗ್ಯ

0
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ: ನರಗುಂದ ಶಿಶು ಅಭಿವೃದ್ಧಿ ಯೋಜನೆಯ ವತಿಯಿಂದ ಚಿಕ್ಕನರಗುಂದ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ-106ರಲ್ಲಿ ಪೋಷಣ್ ಮಾಸಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಶಾಸಕ ಸಿ.ಸಿ. ಪಾಟೀಲ ಉದ್ಘಾಟಿಸಿದರು.

Advertisement

ಕಾರ್ಯಕ್ರಮದಲ್ಲಿ ತಾಯಿಯ ಹೆಸರಲ್ಲಿ ಗಿಡ ನೆಡಲಾಯಿತು. ಪೋಷಣ್ ಅಭಿಯಾನದಡಿ ಸಕ್ಷಮ ಅಂಗನವಾಡಿಗಳಿಗೆ ನೀಡಲಾದ ಟಿವಿ ಉದ್ಘಾಟನೆ ನೆರವೇರಿಸಲಾಯಿತು ಮತ್ತು ಪೌಷ್ಠಿಕ ಆಹಾರ ಶಿಬಿರ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಕೇಂದ್ರ ಪುರಸ್ಕೃತ ಯೋಜನೆಯಾದ ಪೋಷಣ್ ಅಭಿಯಾನದಡಿ ಪ್ರತಿ ವರ್ಷ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳು ಜರುಗುತ್ತಿವೆ. ಉತ್ತಮ ಆರೋಗ್ಯ ಹೊಂದಬೇಕಾದರೆ ಗುಣಮಟ್ಟದ ಪೌಷ್ಠಿಕತೆಯುಳ್ಳ ಸಮತೋಲನ ಆಹಾರದಿಂದ ಮಾತ್ರ ಸಾಧ್ಯ. ಕೇಂದ್ರ ಸರ್ಕಾರದಿಂದ ತಾಲೂಕಿನ 62 ಕೇಂದ್ರಗಳಿಗೆ ಟಿವಿ ವಿತರಿಸಲಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಮಲಾ ಹುಲಕೋಟಿ, ಗ್ರಾ.ಪಂ ಅಧ್ಯಕ್ಷರಾದ ಮಲ್ಲವ್ವ ಮರೆಯಣ್ಣವರ, ಮಾಜಿ ಅಧ್ಯಕ್ಷ ಮುತ್ತುರೆಡ್ಡಿ ರಾಯರೆಡ್ಡಿ, ಜಡಿಯಪ್ಪಗೌಡ ಚೆನ್ನಪ್ಪಗೌಡ್ರ, ಶೃತಿ ಬ್ಯಾಳಿ, ಈರಮ್ಮ ಮುದಿಗೌಡ್ರ, ಶಂಕ್ರಮ್ಮ ಚಲವಾದಿ, ಶರಣಪ್ಪ ಹಳೇಮನಿ, ಅಶೋಕ ಜಾನೋಪಂತ, ಮೇಲ್ವಿಚಾರಕಿ ಭಾರತಿ ಕಾಂಚೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ, ಗರ್ಭಿಣಿ ಮಹಿಳೆಯರು, ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು. ಮಂಜುನಾಥ ಗುಗ್ಗರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here