ಭೀಕರ ಅಪಘಾತ: ಪ್ರವಾಸಕ್ಕೆ ಹೊರಟಿದ್ದ ಐದು ಮಂದಿ ಸಾವು

0
Spread the love

ಗುರುಗ್ರಾಮ:- ಭೀಕರ ರಸ್ತೆ ಅಪಘಾತದಲ್ಲಿ ಪ್ರವಾಸಕ್ಕೆ ಹೊರಟಿದ್ದ ಐದು ಮಂದಿ ಸಾವನ್ನಪ್ಪಿರುವ ಘಟನೆ ಗುರುಗ್ರಾಮದ ರಾಜೀವ್ ಚೌಕ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.

Advertisement

ಅಪಘಾತಕ್ಕೀಡಾದ ವಾಹನವು ಮಹೀಂದ್ರಾ ಥಾರ್ ಆಗಿದ್ದು, ಆರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಎಲ್ಲರೂ ಉತ್ತರ ಪ್ರದೇಶದಿಂದ ಗುರುಗ್ರಾಮ್​ಗೆ ಕೆಲಸಕ್ಕೆ ಸಂಬಂಧಿಸಿದ ಪ್ರವಾಸಕ್ಕೆಂದು ಹೋಗುತ್ತಿದ್ದರು. ರಾಜೀವ್ ಚೌಕ್ ಕಡೆಗೆ ಹೆದ್ದಾರಿಯಿಂದ ನಿರ್ಗಮಿಸುತ್ತಿದ್ದಾಗ, ವೇಗವಾಗಿ ಬಂದ ಥಾರ್ ನಿಯಂತ್ರಣ ಕಳೆದುಕೊಂಡು ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ಪರಿಣಾಮವಾಗಿ ವಾಹನವು ಹಲವು ಬಾರಿ ಪಲ್ಟಿಯಾಗಿದೆ.

ಆರು ಮಂದಿ ಪೈಕಿ ಒಬ್ಬರ ಪ್ರಾಣ ಮಾತ್ರ ಉಳಿದಿದ್ದು, ಉಳಿದ ಐವರು ಸಾವನ್ನಪ್ಪಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here