ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ವಿವಾದಗಳು ರಾಜ್ಯದಲ್ಲಿ ಇತ್ತೀಚೆಗೆ ತೀವ್ರ ಚರ್ಚೆಗೆ ಕಾರಣವಾಗಿವೆ. ಖ್ಯಾತ ಗಾಯಕ ಸೋನು ನಿಗಮ್, ಚಂದಾಪುರದ ಎಸ್ಬಿಐ ಮ್ಯಾನೇಜರ್ ಮತ್ತು ನಟ-ರಾಜಕಾರಣಿ ಕಮಲ್ ಹಾಸನ್ ಅವರ ಹೇಳಿಕೆಗಳು ಕನ್ನಡಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕನ್ನಡ ವಿರೋಧಿ ದರ್ಪ ಪ್ರದರ್ಶನಗೊಂಡಿರುವ ಘಟನೆ ನಡೆದಿದೆ.
ಕರ್ತವ್ಯದಲ್ಲಿದ್ದ ಓರ್ವ ಮಹಿಳಾ ಪಿಎಸ್ ಐ ಮೇಲೆ. ಸೆಪ್ಟೆಂಬರ್ 25 ರಂದು ಜೆಬಿ ನಗರ ಸಂಚಾರ ಠಾಣೆಯ ಮಹಿಳಾ ಪಿಎಸ್ ಐ ಕವಿತಾ ಮತ್ತು ಸಿಬ್ಬಂದಿ ಇಂದಿರಾನಗರದ 100 ಫೀಟ್ ರಸ್ತೆಯ ವೇಪರ್ ಪಬ್ ಬಳಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡ್ತಿದ್ರು. ಈ ವೇಳೆ ಆದಿತ್ಯ ಅಗರವಾಲ್ ತನ್ನ ವರ್ನಾ ಕಾರಿನಲ್ಲಿ ಬಂದು ಪೊಲೀಸ್ರನ್ನ ನೋಡಿ ವಾಲೆಟ್ ಡ್ರೈವರ್ ನ ಕರೆಸಿಕೊಂಡಿದ್ದಾನೆ.
ಈ ವೇಳೆ ಪೊಲೀಸ್ರು ಆತನನ್ನ ಗಮನಿಸಿ ಡ್ರಂಕ್ ಡ್ರೈವ್ ತಪಾಸಣೆ ಮಾಡಲು ಬ್ಲೋವರ್ ಮಶಿನ್ ನಲ್ಲಿ ಉಸಿರು ಊದಲು ಹೇಳಿದ್ದಾರೆ. ಈ ವೇಳೆ ಬ್ಲೋ ಮಾಡಲು ನಿರಾಕರಿಸಿ ಪಿಎಸ್ ಐ ಕವಿತಾ ಮೇಲೆ ಕಿರಿಲ್ ತೆಗೆದಿದ್ದಾನೆ. ಪಿಎಸ್ ಐ ಕವಿತಾ ಕನ್ನಡದಲ್ಲಿ ಮಾನಾಡಿದ್ದಕ್ಕೆ ಕನ್ನಡ ಬರಲ್ಲ, ಕನ್ನಡ ಬೇಡ ಹಿಂದಿಯಲ್ಲಿ ಮಾತಾಡು, ಇಂಗ್ಲೀಷ್ ನಲ್ಲಿ ಮಾತಾಡು, ಹಿಂದಿ ಹಿಂದಿ ಅಂತ ಫುಲ್ ಸೀನ್ ಕ್ರಿಯೇಟ್ ಮಾಡಿ ಅರುಚಾಡಿದ್ದಾನೆ.
ಈ ವೇಳೆ ಈ ಈ ಹಿಂದಿವಾಲ ಎಗಾರಿಡಿಕೊಂಡು ಪಿಎಸ್ ಐ ಮೇಲೆ ನುಗ್ಗಲು ಹೋಗಿದ್ದಾನೆ. ಕಂಠ ಪೂರ್ತಿ ಕುಡಿದಿಲ್ಲ ಅಂದಿದ್ರೆ ಪೊಲೀಸ್ರು ಹೇಳಿ ಬ್ಲೋ ಮಾಡಿದ್ರೆ ಪೊಲೀಸ್ರೆ ಬಿಟ್ಟು ಕಳುಹಿಸುತ್ತಿದ್ರು. ಆದ್ರೆ ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿದ್ದಲ್ಲದೆ ಮಹಿಳಾ ಅಧಿಕಾರಿಗಳ ಮೇಲೆ ಧರ್ಪ ತೊರಿರೋದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಸದ್ಯ ಈ ಅಹಂಕಾರಿ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಇಂದಿರಾನಗರ ಪೊಲೀಸ್ರು ಆರೋಪಿ ಆದಿತ್ಯಾ ಅಗರವಾಲ್ ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.