ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮಕ್ಕಳ ಶ್ರೇಯೋಭಿವೃದ್ಧಿಗಾಗಿ ತಾಲೂಕಿನ ನಾಗರಮಡುವು ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶಿರಹಟ್ಟಿ ತಾಲೂಕಿನ ನಾಗರಮಡುವು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 23 ಲಕ್ಷ ರೂ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಜೀವನ ಆರಂಭವಾಗುವುದು ಅಂಗನವಾಡಿ ಕೇಂದ್ರದಿಂದ. ಅವರಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು ಇದು ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಅವರ ಸರ್ವತೋಮುಖ ಬೆಳವಣಿಗೆಗಾಗಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಶೀಘ್ರದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿ ಗ್ರಾಮದ ಮಕ್ಕಳಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಗ್ರಾ.ಪಂ ಅಧ್ಯಕ್ಷೆ ಕರೆವ್ವ ಹರಿಜನ, ಗಂಗಯ್ಯ ಹಿರೇಮಠ, ಉಪಾಧ್ಯಕ್ಷೆ ಮೀನಾಕ್ಷವ್ವ ಬೆಳಗಟ್ಟಿ, ಗಂಗಾಧರ ಸೂರಣಗಿ, ಬೀರಪ್ಪ ಆನೆಪ್ಪನವರ, ಹೇಮಾ ಪುಟ್ಟಮ್ಮನವರ, ಮಲ್ಲವ್ವ ಆನೆಪ್ಪನವರ, ರೇವಣಪ್ಪ ಆನೆಪ್ಪನವರ, ಬಸವರಾಜ ಬೆಳಗಟ್ಟಿ, ವೀರಭದ್ರಪ್ಪ ಅರಸಿಶಣದ, ಪುಟ್ಟಪ್ಪ ಬೆಳಗಟ್ಟಿ, ಮುತ್ತಣ್ಣ ತೋಟದ, ಶಂಕರ ಮರಾಟೆ, ತಿಮ್ಮರೆಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಬಸವಲಿಂಗಪ್ಪ ಅಂಗಡಿ, ಅಶೋಕ ಕಪ್ಪಲಿ, ರವಿ ಭಜಂತ್ರಿ, ಬೀರಪ್ಪ ಬೆಳಗಟ್ಟಿ, ಬಸವರಾಜ ಇಚ್ಚಂಗಿ, ಹನುಮಂತಪ್ಪ ಬೆಳಗಟ್ಟಿ, ಸಿದ್ದಪ್ಪ ಗುಡೇದ, ತಿಪ್ಪಣ್ಣ ಅಗಳಿ, ಶಿವಪ್ಪ ಅರಸಿ, ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ, ನಿರ್ಮಿತಿ ಕೇಂದ್ರದ ಎಇ ವಿಜಯ ಯಳಮಲಿ, ಶರಣಪ್ಪ ತಳವಾರ ಮುಂತಾದವರು ಉಪಸ್ಥಿತರಿದ್ದರು.


