R Ashok: ಕರೂರು ಕಾಲ್ತುಳಿದ ದುರಂತಕ್ಕೆ ಇಡೀ ದೇಶ ಬೆಚ್ಚಿಬಿದ್ದಿದೆ – ಆರ್ ಅಶೋಕ್

0
Spread the love

ಬೆಂಗಳೂರು:- ಕರೂರು ಕಾಲ್ತುಳಿದ ದುರಂತಕ್ಕೆ ಇಡೀ ದೇಶ ಬೆಚ್ಚಿಬಿದ್ದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆತಂಕ ಹೊರಹಾಕಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಇಂಥ ಘಟನೆ ದೇಶದ ಬೇರೆ ಕಡೆ ಎಲ್ಲೂ ಆಗಿಲ್ಲ. ದುರ್ಘಟನೆಯಲ್ಲಿ ಚಿಕ್ಕ ಮಕ್ಕಳೂ ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಇಡೀ ದೇಶ ಬೆಚ್ಚಿಬಿದ್ದಿದೆ ಎಂದಿದ್ದಾರೆ. ಕರೂರು ದುರಂತ ಸಾರ್ವಜನಿಕರಿಗೆ ದೊಡ್ಡ ದಿಗ್ಭ್ರಾಂತಿ ತಂದಿದೆ. ಡಿಎಂಕೆ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಂಡು ವಿಜಯ್ ತಲೆಗೆ ಪ್ರಕರಣ ಕಟ್ಟುತ್ತಿದೆ. ಅವರು ಸ್ಥಳ ಕೇಳಿದ್ದೆಲ್ಲಿ? ಅಲ್ಲಿನ ಸರ್ಕಾರ ಅನುಮತಿ ಕೊಟ್ಟಿದ್ದೆಲ್ಲಿ? ವಿಜಯ್ ಬಂದು ರ‍್ಯಾಲಿ ಮಾಡಿದ್ರು ಹೋದ್ರು, ಅವರದ್ದೂ ತಪ್ಪಿದೆ. ವಿಜಯ್ ಕ್ಷಮೆ ಕೇಳಿಲ್ಲ, ಆಸ್ಪತ್ರೆಗೆ ಹೋಗಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪಾತ್ರವೇ ದೊಡ್ಡದು, ದುರಂತಕ್ಕೆ ರಾಜ್ಯ ಸರ್ಕಾರ ಕಾರಣ. ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಕಾನೂನು ಸುವ್ಯವಸ್ಥೆ ಕಾಪಾಡಿಲ್ಲ. ಜನರ ಸಾವಿಗೆ ನೇರ ಕಾರಣ ಡಿಎಂಕೆ ಸರ್ಕಾರ. ಈ ದುರಂತ ಪ್ರಕರಣವನ್ನು ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here