ಎರಡು ಕಾರುಗಳು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಐದು ಮಂದಿ ಸಾವು!

0
Spread the love

ಚಂಡೀಗಢ: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಐದು ಮಂದಿ ಮೃತಪಟ್ಟಿರುವ ಘಟನೆ ಹರಿಯಾಣದ ಕುರುಕ್ಷೇತ್ರ-ಕೈತಾಲ್ ರಸ್ತೆಯಲ್ಲಿ ನಡೆದಿದೆ. ಪ್ರವೀಣ್, ಪವನ್, ಅವರ ಪತ್ನಿ ಉರ್ಮಿಳಾ, ರಾಜೇಂದ್ರ ಹಾಗೂ ಸುಮನ್ ಮೃತ ದುರ್ಧೈವಿಗಳಾಗಿದ್ದು,

Advertisement

ಇಂದು ಐವರು ಟಾಟಾ ಹ್ಯಾರಿಯರ್ ಕಾರಿನಲ್ಲಿ ಅಂಬಾಲಾ ಕಡೆಗೆ ಹೋಗುತ್ತಿದ್ದರು. ಇದೇ ಸಮಯಕ್ಕೆ ಯಮುನಾನಗರ HR 13F 3611 ನೋಂದಣಿ ಸಂಖ್ಯೆ ಹೊಂದಿದ್ದ ಮಾರುತಿ ಸ್ವಿಫ್ಟ್ ಕಾರೊಂದು ಎದುರಿಗೆ ಬಂದಿದ್ದು,

ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಎರಡು ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಕೂಡಲೇ ಸ್ಥಳೀಯರು ಕಾರಿನಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here