ಬೆಂಗಳೂರು: ರಕ್ಕಸ ರಸ್ತೆ ಗುಂಡಿಗೆ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಬೆಂಗಳೂರಿನ ಬೂದಿಗೆರೆ ಕ್ರಾಸ್ ಬಳಿ ನಡೆದಿದೆ. 22 ವರ್ಷ ವಯಸ್ಸಿನ ಧನುಶ್ರೀ ಎಂಬ ಯುವತಿ ಕಾಲೇಜಿಗೆ ಸ್ಕೂಟಿಯಲ್ಲಿ ಹೋಗುತ್ತಿರುವಾಗ ಈ ಅಪಘಾತ ಸಂಭವಿಸಿದ್ದು,
Advertisement
ರಸ್ತೆ ಗುಂಡಿ ತಪ್ಪಿಸಲು ಹೋಗಿ ಟಿಪ್ಪರ್ ಧನುಶ್ರೀಯ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಆಕೆ ಕೆಳಗೆ ಬಿದ್ದಿದ್ದು, ಆಕೆಯ ಮೇಲೆಯೇ ಟಿಪ್ಪರ್ ಹರಿದಿದೆ.
ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಇನ್ನೂ ಟಿಪ್ಪರ್ ಚಾಲಕ ಲಾರಿ ಸಮೇತ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಆವಲಹಳ್ಳಿ ಪೊಲೀಸರು ಟಿಪ್ಪರ್ ಪತ್ತೆಗೆ ಮುಂದಾಗಿದ್ದಾರೆ.