HomeGadag Newsಗದಗ ಜಿಲ್ಲೆ ಕರ್ನಾಟಕದಲ್ಲಿ ಪ್ರಥಮ, ದೇಶದಲ್ಲಿ 4ನೇ ಸ್ಥಾನ: 25ಲಕ್ಷ ರೂ  ಬಹುಮಾನ

ಗದಗ ಜಿಲ್ಲೆ ಕರ್ನಾಟಕದಲ್ಲಿ ಪ್ರಥಮ, ದೇಶದಲ್ಲಿ 4ನೇ ಸ್ಥಾನ: 25ಲಕ್ಷ ರೂ  ಬಹುಮಾನ

For Dai;y Updates Join Our whatsapp Group

Spread the love

ಗದಗ :- ಜಲಶಕ್ತಿ ಅಭಿಯಾನದ ಅಂಗವಾಗಿ ಜಲಸಂಚಾಯಿ ಜನಭಾಗಿದಾರಿ 1.0 ಕಾರ್ಯಕ್ರಮದಡಿ ಗದಗ ಜಿಲ್ಲೆಯು ಜಲ ಸಂರಕ್ಷಣೆ ಅಡಿಯಲ್ಲಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಗಳಿಸಿ ಪ್ರಶಂಸೆಗೆ ಪಾತ್ರವಾಗಿದೆ.

ದೇಶದ 780 ಜಿಲ್ಲೆಗಳಲ್ಲಿ ಜೋನ್ 3 ಕೆಟಗರಿ 3 ರಲ್ಲಿ 4ನೇ ಸ್ಥಾನ ಪಡೆದು, 25 ಲಕ್ಷ ರೂಪಾಯಿಗಳ ನಗದು ಬಹುಮಾನಕ್ಕೆ ಭಾಜನವಾಗಿದೆ. ಈ ಗೌರವವು ಗದಗ ಜಿಲ್ಲೆಯ ಜನಸಾಮಾನ್ಯ, ಸರ್ಕಾರಿ ಸಂಸ್ಥೆಗಳು ಮತ್ತು ಎನ್.ಜಿ.ಓ.ಗಳ ಒಗ್ಗಟ್ಟಿನ ಶಕ್ತಿಯ ಸಾಕ್ಷಿಯಾಗಿದೆ.

ಜಲಸಂಚಾಯಿ ಅಂದ್ರೆ ಎನು? ಅದರ ಗುರಿಗಳು ಯಾವವು : ನೀರಿಗಾಗಿ ಒಂದಾಗಿ ‘ಪ್ರತಿ ಹನಿ ನೀರನ್ನು ಸಂರಕ್ಷಿಸಿ’ ಎಂಬ ಧ್ಯೇಯದೊಂದಿಗೆ ಜಲಸಂಚಾಯಿ ಜನಭಾಗಿದಾರಿ 1.0 ಅಭಿಯಾನವು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು, ಮಳೆ ನೀರನ್ನು ಸಂಗ್ರಹಿಸುವುದು, ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಬೆಳೆಸುವುದು, ಹವಾಮಾನ ಸ್ಥಿತಿಗತಿಯನ್ನು ಉತ್ತೇಜಿಸುವುದು ಮತ್ತು ನೀರಿನ ಗುಣಮಟ್ಟ ವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಸ್ಥಳೀಯ ಸಮುದಾಯ, ಸರ್ಕಾರಿ ಸಂಸ್ಥೆಗಳು ಮತ್ತು ಎನ್.ಜಿ.ಓ.ಗಳ ಸಹಯೋಗದಿಂದ ಈ ಕಾರ್ಯಕ್ರಮವು ನೀರಿನ ಕೊರತೆಯ ಸವಾಲಿಗೆ ಸಮರ್ಥ ಪರಿಹಾರವನ್ನು ಹುಡುಕುವುದಾಗಿದೆ.

ಗದಗ ಜಿಲ್ಲೆಯ ಜ‌ಲಕ್ರಾಂತಿ ಕೊಡುಗೆ: 11,971 ಕಾಮಗಾರಿಗಳ ಸಾಧನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಸೇರಿದಂತೆ ಇತರ ಯೋಜನೆಗಳಡಿ, ಗದಗ ಜಿಲ್ಲೆಯು 01-04-2024 ರಿಂದ 31-03-2025 ರವರೆಗೆ 11,971 ಜಲಸಂರಕ್ಷಣೆ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ,

ಜಲಸಂಚಾಯಿ ಪೋರ್ಟಲ್ ನಲ್ಲಿ ದಾಖಲಿಸಿದ್ದು ಇವುಗಳಲ್ಲಿ 11,329 ವೈಯಕ್ತಿಕ ಮತ್ತು ಸಮುದಾಯ ಬದು ನಿರ್ಮಾಣಗಳು, 75 ಬೋರ್‌ವೆಲ್ ರೀಚಾರ್ಜ್‌ಗಳು, 60 ಸೋಕ್‌ಪಿಟ್‌ಗಳು, 465 ಮಳೆನೀರು ಕೊಯ್ಲು ಕಾಮಗಾರಿಗಳು, 10 ಚೆಕ್ ಡ್ಯಾಂಗಳು ಮತ್ತು 32 ಗಲ್ಲಿ ಪ್ಲಗ್‌ಗಳು ಸೇರಿವೆ. ಈ ಕಾಮಗಾರಿಗಳು ಗದಗ ಜಿಲ್ಲೆಯ ಜಲ ಸಂರಕ್ಷಣೆಯ ಚಿತ್ರಣವನ್ನೇ ಬದಲಾಯಿಸಿವೆ.

ಕೇಂದ್ರ ತಂಡದಿಂದ ಮನ್ನಣೆ ಪಡೆದ ಗದಗ ಜಿಲ್ಲಾ ಪಂಚಾಯತ್
ಕೇಂದ್ರ ನೋಡಲ್ ಆಫೀಸರ್ ತಂಡವು 16-06-2025 ರಿಂದ 21-06-2025ರವರೆಗೆ ಗದಗ ಜಿಲ್ಲೆಯಲ್ಲಿ ಶೇ. 1 % ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಗಳ ಗುಣಮಟ್ಟ ಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತು. ಶೇ. 99 % ಡೆಸ್ಕ್‌ಟಾಪ್‌ ಮೌಲ್ಯ ಮಾಪನದಲ್ಲಿಯೂ ಈ ಕಾಮಗಾರಿಗಳು ಉನ್ನತ ಮಾನದಂಡ ಗಳನ್ನು ಪೂರೈಸಿವೆ ಎಂದು ದಾಖಲಾಗಿದೆ. ಈ ಸಾಧನೆಯು ಗದಗ ಜಿಲ್ಲೆಯನ್ನು ಕರ್ನಾಟಕದಲ್ಲಿ ಮೊದಲ ಸ್ಥಾನಕ್ಕೆ ಒಯ್ಯುವುದು ಮಾತ್ರವಲ್ಲದೆ, ದೇಶದಲ್ಲಿಜೋನ್ 3 ಕೆಟಗರಿ 3, 4ನೇ ಸ್ಥಾನವನ್ನು ಗಳಿಸುವಂತೆ ಮಾಡಿದೆ.

ಈ ಅಭಿಯಾನದ ಯಶಸ್ಸಿಗೆ ಜಿಲ್ಲಾಧಿಕಾರಿಗಳು,ಉಪವಿಭಾಗ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮನರೇಗಾ ಯೋಜನೆಯ ಸಹಾಯಕ ಕಾರ್ಯಕ್ರಮ ಸಮನ್ವಯ ಅಧಿಕಾರಿ ಕಿರಣಕುಮಾರ್ ಮತ್ತು ಅವರ ತಂಡ,ಜಿಲ್ಲೆಯ ಡಿಇಓ ರವರ ಅವಿರತ ಶ್ರಮವೇ ಕಾರಣ. ಗದಗ ಜಿಲ್ಲೆಯ ಈ ಜಲಕ್ರಾಂತಿಯು ರಾಜ್ಯಕ್ಕೆ ಮಾದರಿಯಾಗಿದ್ದು, ಜಲಸಂರಕ್ಷಣೆಯಲ್ಲಿ ಒಗ್ಗಟ್ಟಿನ ಶಕ್ತಿಯನ್ನು ಸಾರಿದೆ.

25 ಲಕ್ಷ ರೂ. ಬಹುಮಾನದೊಂದಿಗೆ ಹೊಸ ಉತ್ಸಾಹ ಕೇಂದ್ರ ಸರ್ಕಾರದಿಂದ ಘೋಷಿತವಾದ 25 ಲಕ್ಷ ರೂಪಾಯಿಗಳ ಬಹುಮಾನವು ಗದಗ ಜಿಲ್ಲೆಯ ಈ ಜಲಯಾತ್ರೆಗೆ ಹೊಸ ಉತ್ಸಾಹ ತುಂಬಿದೆ. ಈ ಸಾಧನೆಯು ಗದಗ ಜಿಲ್ಲೆಯನ್ನು ಜಲ ಸಂರಕ್ಷಣೆಯಲ್ಲಿ ರಾಷ್ಟ್ರಮಟ್ಟದ ಗಮನಕ್ಕೆ ತಂದಿದೆ, ಜೊತೆಗೆ ಭವಿಷ್ಯದಲ್ಲಿ ಇನ್ನಷ್ಟು ಕಾಮಗಾರಿಗಳಿಗೆ ಪ್ರೇರಣೆಯಾಗಿದೆ. ಇಂತಹ ಇನ್ನಷ್ಟು ಪ್ರಶಸ್ತಿ ಗದಗ ಜಿಲ್ಲೆಗೆ ಲಭಿಸಲಿ ಅನ್ನುವುದು ಎಲ್ಲರ ಆಶಯ..

ಜಲಸಂಚಾಯಿ ಜನಭಾಗಿದಾರಿ ಅಭಿಯಾನದಲ್ಲಿ ಕರ್ನಾಟಕದಲ್ಲೇ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ಸಂತಸ ತರಿಸಿದೆ. ಅಂತರ್ಜಲ ಮಟ್ಟ ಹೆಚ್ಚಳ ಮತ್ತು ಪರಿಸರ ಸಂರಕ್ಷಣೆ ಕುರಿತು ಜಿಲ್ಲೆಯ ಅಧಿಕಾರಿಗಳು ಶ್ರಮವಹಿಸಿ ಹಲವು ಕಾಮಗಾರಿಗಳನ್ನು ಅನುಷ್ಟಾನ ಮಾಡಿರುವುದು ಪ್ರಶಂಸೆನೀಯ. ಪ್ರಥಮ ಸ್ಥಾನ ಬಂದಿರುವುದಕ್ಕೆ ಜಿಲ್ಲೆಗೆ ನಗದು ರೂಪದಲ್ಲಿ ೨೫ ಲಕ್ಷ ಅನುದಾನ ನೀಡುತ್ತಿದ್ದಾರೆ. ಬರುವ ಅನುದಾನವನ್ನು ಅಭಿಯಾನದ ಉದ್ದೇಶ ಈಡೇರಿಕೆಗೆ ಬಳಸಿಕೊಳ್ಳಲು ಶ್ರಮಿಸಲಾಗುವುದು.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಬದುನಿರ್ಮಾಣ ಕಾಮಗಾರಿ, ಚೆಕ್ ಡ್ಯಾಂ ನಿರ್ಮಾಣ, ಬೋರವೆಲ್ ರೀಚಾರ್ಜ್ ಕಾಮಗಾರಿ ಸೇರಿದಂತೆ ಹಲವು ಪರಿಸರ ಸ್ನೇಹಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲಾಗಿದೆ. ಅನುಷ್ಠಾನ ಮಾಡಲಾದ ಎಲ್ಲಾ ಕಾಮಗಾರಿಗಳನ್ನು ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಪರಿಶೀಲನೆ ಸಂದರ್ಭದಲ್ಲಿ ಕೇಂದ್ರ ತಂಡ ಜಿಲ್ಲೆಯ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಹೀಗಾಗಿ ಗದಗ ಜಿಲ್ಲೆಗೆ ಈ ಅಭಿಯಾನದಡಿ ಪ್ರಥಮ ಸ್ಥಾನ ದೊರಕಿರುವುದು ನಮಗೆ ಮತ್ತಷ್ಟು ಕಾಮಗಾರಿಗಳನ್ನು ಅನುಷ್ಟಾನಿಸಲು ಪ್ರೋತ್ಸಾಹಕವಾಗಿದೆ.

ಜಿಲ್ಲೆಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ 11971 ಕಾಮಗಾರಿಗಳ ಮಾಹಿತಿಯನ್ನು ಜಲಸಂಚಾಯಿ ಜನಭಾಗಿದಾರಿ ೧.೦ ಪೋರ್ಟಲ್ ನಲ್ಲಿ ಅಪಲೋಡ ಮಾಡಲಾಗಿದೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅತೀ ಹೆಚ್ಚು ಕಾಮಗಾರಿಗಳನ್ನು ಜಿಲ್ಲೆಯಲ್ಲಿ ಅನುಷ್ಟಾನಿಸಿರುವುದರಿಂದಲೇ ಈ ಪ್ರಶಸ್ತಿ ಬಂದಿದೆ.

ಇದಕ್ಕೆ ಪೂರಕವಾಗಿ ಇನ್ನಷ್ಟು ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಮನರೇಗಾ ಯೋಜನೆಯಡಿಯಲ್ಲಿ ಕ್ರಿಯಾಯೋಜನೆ ನಿಯಮನುಸಾರ ತಯಾರಿಸಿ ಮತ್ತು ಅನುಮೋದನೆ ತೆಗೆದುಕೊಂಡು ಇನ್ನು ಹೆಚ್ಚಿನ ಕ್ರಿಯಾತ್ಮಕ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಮೇಲಾಧಿಕಾರಿಗಳ ಸೂಚನೆಯಂತೆ ಕ್ರಮವಹಿಸಲಾಗುವುದು.ಮತ್ತು ಸದರಿ ಅಭಿಯಾನಧಡಿ ಶ್ರಮಿಸಿದ ಮನರೇಗಾ ತಂಡಕ್ಕೆ ಮತ್ತು ಜಿಲ್ಲೆಯ deo ಗಳಿಗೆ ಅಭಿನಂದನೆಗಳು.

ಕಿರಣಕುಮಾರ್ ಎಸ್.ಹೆಚ್.ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ , ಮನರೇಗಾ ವಿಭಾಗ ಜಿಲ್ಲಾ ಪಂಚಾಯತ್ ಗದಗ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!