ಅ.6ರಿಂದ ಬಂಜಾರರಿಂದ ಬೃಹತ್ ಪ್ರತಿಭಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಅವೈಜ್ಞಾನಿಕ ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಗದಗ ಜಿಲ್ಲಾ ಬಂಜಾರ ಸಮುದಾಯದ ಮುಖಂಡರಿಂದ ಗದಗ ತಾಲೂಕಿನ ನಾಗಾವಿಯ ಸುಕ್ಷೇತ್ರ ಶ್ರೀ ರೇಣುಕಾದೇವಿ ಯಲ್ಲಮ್ಮ ದೇವಸ್ಥಾನದಲ್ಲಿ ಜಿಲ್ಲೆಯ ಮುಖಂಡರು ಹೋರಾಟದ ಕುರಿತು ರೂಪರೇಷೆಗಳು ಹಮ್ಮಿಕೊಳ್ಳಲು ಪೂರ್ವಭಾವಿ ಸಭೆ ಜರುಗಿತು.

Advertisement

ಸಭೆಯಲ್ಲಿ ಗದಗ ಜಿಲ್ಲೆಯ ಬಂಜಾರ ಸಮುದಾಯದ 72 ತಾಂಡಾಗಳ ನಾಯಕ್, ಡಾವ್, ಕಾರಭಾರಿ ಮತ್ತು ಮುಖಂಡರೆಲ್ಲರೂ ಸೇರಿ ಅಕ್ಟೋಬರ್ 6ರಿಂದ ಗದಗ ಜಿಲ್ಲಾಡಳಿತ ಕಚೇರಿ ಎದುರು ಬೃಹತ್ ಪ್ರತಿಭಟನೆಯೊಂದಿಗೆ ಅಹೋರಾತ್ರಿ ಧರಣಿಯನ್ನು ನಡೆಸಲು ತೀರ್ಮಾನಿಸಿದರು. ರಾಜ್ಯ ಸರ್ಕಾರದ ಒಳ ಮೀಸಲಾತಿ ಅವೈಜ್ಞಾನಿಕ ವರ್ಗೀಕರಣದ ತಾರತಮ್ಯ ನೀತಿ ಮತ್ತು ಇಬ್ಬಗೆಯ ಧೋರಣೆಯನ್ನೂ ಮುಖಂಡರು ಖಂಡಿಸಿದರು. ಬಂಜಾರ, ಕೊರಮ, ಕೊರಚ, ಭೋವಿ ಜಾತಿಗಳಿಗೆ ರಾಜ್ಯ ಸರ್ಕಾರ ಅನ್ಯಾಯವೆಸಗಿದೆ. ಒಳ ಮೀಸಲಾತಿಯ ವರ್ಗೀಕರಣದಲ್ಲಿ ನಮ್ಮ ಸಮುದಾಯಗಳಿಗೆ ಸಂಪೂರ್ಣವಾಗಿ ನ್ಯಾಯ ಸಿಗುವವರೆಗೆ ಹೋರಾಟವನ್ನು ಕೈಬಿಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಕೆ.ಸಿ. ನಭಾಪುರ, ಶಿವಪುತ್ರಪ್ಪ ನಾಯಕ, ಶಿವಪ್ಪ ನಾಯಕ, ಟಿಕು ನಾಯಕ, ಕುಬೇರ ನಾಯಕ, ಚಂದು ನಾಯಕ, ಕಿಮಪ್ಪ ನಾಯ್ಕ, ನೂರಪ್ಪ ನಾಯಕ, ಮೀಟಪ್ಪ ನಾಯಕ, ಶ್ರೀನಿವಾಸ ನಾಯಕ, ಪುರಪ್ಪ ನಾಯಕ, ತೇಜ್ಯಾ ನಾಯಕ, ರಾಜು ನಾಯಕ, ಪಾಂಡಪ್ಪ ನಾಯಕ, ಸೋಮನಾಥ ನಾಯಕ, ಟಾಕರಪ್ಪ ನಾಯಕ, ಡಿ.ಎಲ್. ನಾಯಕ, ರೂಪಲೆಪ್ಪ ನಾಯಕ, ದೇವಾನಂದ ನಾಯಕ, ರಾಮಪ್ಪ ನಾಯಕ, ಶಿವಪ್ಪ ಕಾರಭಾರಿ, ನಾರಾಯಣ ಪೂಜಾರ, ಮಲ್ಲೇಶ್ ಕಾರಭಾರಿ, ನೀಲು ರಾಠೋಡ, ಐ.ಎಸ್. ಪೂಜಾರ, ಸೋಮು ಲಮಾಣಿ, ಚಂದ್ರಕಾಂತ ಚವ್ಹಾಣ, ಪರಮೇಶ ನಾಯಕ, ದನಸಿಂಗ ನಾಯಕ, ವಿಠ್ಠಲ ತೋಟದ, ಟಿ.ಡಿ. ಪೂಜಾರ, ಕುಬೇರಪ್ಪ ಪವಾರ, ಧನುರಾಮ ತಂಬೂರಿ, ಕುಬೇರಪ್ಪ ರಾಠೋಡ, ಪಾಂಡಪ್ಪ ಲಮಾಣಿ, ವಿಠ್ಠಲ ಕಾರಭಾರಿ, ನಾರಾಯಣ ಕಾರಭಾರಿ, ದೇವಪ್ಪ ಲಮಾಣಿ, ಧರ್ಮಸಿಂಗ ನಾಯಕ, ಗೋಪಾಲ ಪೂಜಾರ, ಕೇಶಪ್ಪ ಕಾರಭಾರಿ, ಪುರಪ್ಪ ಲಮಾಣಿ, ರಮೇಶ ಕಾರಭಾರಿ, ಶಿವಪ್ಪ ನಾಯಕ, ಸೋಮಪ್ಪಾ ಪೂಜಾರ, ಲಚ್ಚಪ್ಪ ಲಮಾಣಿ, ಧನುರಾಮ ಲಮಾಣಿ, ಕುಮಾರ್ ಕಾರಭಾರಿ, ಧಾಮಲೆಪ್ಪ ನಾಯಕ, ಸೋಮಶೇಖರ ಕಾರಭಾರಿ, ಭೀಮಪ್ಪ ಲಮಾಣಿ, ದುಗ್ಗಪ್ಪ ಲಮಾಣಿ, ಹರೀಶ ಲಮಾಣಿ, ಭೋಜಪ್ಪ ರಾಠೋಡ, ರಾಜಕುಮಾರ್ ಕಟ್ಟಿಮನಿ, ಬಾಬು ರಾಠೋಡ, ಗೋಪಾಲ ಲಮಾಣಿ, ರಾಘವೇಂದ್ರ ರಾಠೋಡ, ಸುರೇಶ್ ಪವಾರ, ಕೃಷ್ಣಪ್ಪ ಲಮಾಣಿ, ಚಂದ್ರಶೇಖರ್ ಲಮಾಣಿ, ಪರಶುರಾಮ ಲಮಾಣಿ, ಸುರೇಶ್ ಚವ್ಹಾಣ, ವಿಷ್ಣು ಕಾರಭಾರಿ, ಮೋಹನ ಪೂಜಾರ ಸೇರಿದಂತೆ ಗದಗ ಜಿಲ್ಲೆಯ ಎಲ್ಲಾ ತಾಂಡಾಗಳ ನಾಯಕ, ಡಾವ್, ಕಾರಭಾರಿ, ಹಿರಿಯರು, ಸಂಘಟಕರು ಭಾಗವಹಿಸಿದ್ದರು.

ಹೋರಾಟದಲ್ಲಿ ಬಂಜಾರ ಸಮುದಾಯದ ಜೀವನ ಶೈಲಿ ಹಾಗೂ ಹಿಂದಿನ ಪಾರಂಪರಿಕ ಪದ್ಧತಿಗಳು, ಸಾಂಪ್ರದಾಯಿಕ ಕಲೆ, ನೃತ್ಯ, ಭಜನೆ, ವಾಜಾ, ಧಾರ್ಮಿಕ ಪದ್ಧತಿಗಳನ್ನು ಈ ಹೋರಾಟದಲ್ಲಿ ಬಿಂಬಿಸುವುದರ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದೆಂದು ಕರ್ನಾಟಕ ಬಂಜಾರ ಲಂಬಾಣಿ ಹಕ್ಕು ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ತಿಳಿಸಿದರು.

 


Spread the love

LEAVE A REPLY

Please enter your comment!
Please enter your name here