ಶಿವಮೊಗ್ಗ:- ಶಿವಮೊಗ್ಗದಲ್ಲಿ ಮಹಿಳೆಯ ಎಲೆಕ್ಟ್ರಿಕ್ ಬೈಕ್‌ಗೆ ಡಿಕ್ಕಿಯಾಗಿ ಎಳೆದೊಯ್ದ ಕಾರನ್ನು ತಡೆದು, ವೈದ್ಯರೊಬ್ಬರಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜರುಗಿದೆ.
Advertisement
ನಗರದ ಸವಳಂಗ ರಸ್ತೆಯ ಆಸ್ಪತ್ರೆಯೊಂದರ ಮುಂಭಾಗ ಎಲೆಕ್ಟ್ರಿಕ್ ಬೈಕ್‌ಗೆ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಗೆ ಕಾರು ಡಿಕ್ಕಿಯಾಗಿದೆ. ಅಡಿಗೆ ಸಿಲುಕಿದ್ದ ಎಲೆಕ್ಟ್ರಿಕ್ ಬೈಕ್‌ನ್ನು ಕಾರು ಸ್ವಲ್ಪ ದೂರದ ತನಕ ಎಳೆದೊಯ್ದಿದೆ. ಅಡ್ಡಾದಿಡ್ಡಿ ಚಲಿಸಿದ ಕಾರು ಆಸ್ಪತ್ರೆ ಮುಂಭಾಗ ಡಿವೈಡರ್‌ಗೆ ಡಿಕ್ಕಿಯಾಗಿ ನಿಂತಿದೆ.
ಈ ವೇಳೆ ರೊಚ್ಚಿಗೆದ್ದ ಸಾರ್ವಜನಿಕರು ಕಾರು ಚಲಾಯಿಸುತ್ತಿದ್ದ ವೈದ್ಯರಿಗೆ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ ಜನ ಕಾರಿನ ಬಾನೆಟ್ ಮೇಲೆ ಹತ್ತಿ ಒದ್ದು ಗಾಜು ಪುಡಿ ಮಾಡಿದ್ದಾರೆ. ಸಾರ್ವಜನಿಕರು ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.