ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದ ಕನ್ನಡ ಸಾಹಿತ್ಯ ಭವನದ ಬಳಿ ಇರುವ ಹಜರತ್ ಮೆಹಬೂಬ ಸುಬ್ಹಾನಿ ದರ್ಗಾದ ಉರುಸು ಧಾರ್ಮಿಕ ಕಾರ್ಯಕ್ರಮವು ಹಿಂದೂ-ಮುಸ್ಲಿಂ ಭಕ್ತರ ಸಂಗಮದಲ್ಲಿ ಅ.2ರಿಂದ ಆರಂಭಗೊಳ್ಳಲಿದೆ ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಭಾವಾಸಾಬ ಬೆಟಗೇರಿ ಹೇಳಿದರು.
ಅವರು ಮಂಗಳವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿ,
ಪಟ್ಟಣದ ಸರ್ವ ಜನಾಂಗದವರು ಹಜರತ್ ಮೆಹಬೂಬ ಸುಬ್ಹಾನಿ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಸಹೋದರೆತನವನ್ನು ಮೆರೆಯುತ್ತಾರೆ. ಅ. 2ರಂದು ಗಂಧ ಲೇಪನ ಕಾರ್ಯ ಜರುಗಲಿದ್ದು, ಅ. 3ರಂದು ಹಜರತ್ ಮೆಹಬೂಬ ಸುಬ್ಹಾನಿ ದರ್ಗಾದ ಉರುಸು ನಡೆಯಲಿದೆ. ಈ ದಿನದಂದು ಸಕಲ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಉರುಸು ದಿನದಂದು ವಿಶೇಷ ಧಾರ್ಮಿಕ ಕಾರ್ಯಗಳು ಜರುಗಲಿವೆ.
ಪಟ್ಟಣದ ಜನತೆ ಉರುಸು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಯಶಸ್ವಿಗೊಳಿಸಬೇಕು ಎಂದರು. ಮಲಿಕ ಯಲಿಗಾರ ಸೇರಿದಂತೆ ದರ್ಗಾ ಕಮಿಟಿ ಪದಾಧಿಕಾರಿಗಳು ಉಪಸ್ಥಿತರಿದ್ದರು.