ಕವಿಗಳಿಗೆ ಸಾಮಾಜಿಕ ಕಳಕಳಿ ಅಗತ್ಯ: ಹಿರಿಯ ಸಾಹಿತಿ ಡಿ.ವಿ. ಬಡಿಗೇರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿ ಸಾಹಿತಿಯಾದವನಿಗೆ ಜವಾಬ್ದಾರಿ ಅಧಿಕವಾಗಿದೆ. ಸಮಾಜದ ಓರೆ-ಕೋರೆಗಳನ್ನು ತನ್ನ ಕಾವ್ಯದ ಮೂಲಕ ತಿದ್ದುವ ಕಾರ್ಯವನ್ನು ಕವಿ ಮಾಡಬೇಕು. ಸಂಕಟಗಳನ್ನು ಕವಿತೆಗಳು ಧ್ವನಿಸಬೇಕು. ಈ ಹಿನ್ನೆಲೆಯಲ್ಲಿ ಬರಹಗಾರನಿಗೆ ಬದ್ಧತೆ ಮತ್ತು ಸಾಮಾಜಿಕ ಕಳಕಳಿ ಅಗತ್ಯ ಎಂದು ಹಿರಿಯ ಸಾಹಿತಿ ಡಿ.ವಿ. ಬಡಿಗೇರ ಅಭಿಪ್ರಾಯಪಟ್ಟರು.

Advertisement

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೆ.ಎಲ್.ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಗದಗ ವತಿಯಿಂದ ಜರುಗಿದ ಜಿಲ್ಲಾ ಮಟ್ಟದ ದಸರಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಕಾವ್ಯ ಪರಂಪರೆ ಶ್ರೀಮಂತವಾಗಿದ್ದು, ಅದನ್ನು ಇಂದಿನ ಕವಿಗಳು ಓದುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡು ಕವಿತೆಗಳನ್ನು ಬರೆದಾಗ ಮೌಲ್ಯ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಡಾ. ಎ.ಕೆ. ಮಠ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಸಂಸ್ಕೃತಿ ಕುರಿತಾಗಿ ಆಸಕ್ತಿ ಕಡಿಮೆಯಾಗುತ್ತಿದ್ದು, ಇಂತಹ ಕಾರ್ಯಕ್ರಮಗಳು ಸೃಜನಶೀಲ ಅಭಿವ್ಯಕ್ತಿ ಪ್ರೇರಣೆಯನ್ನು ಒದಗಿಸಲಿ ಎಂದು ಆಶಿಸಿದರು.

ಕವಿಗೋಷ್ಠಿಯಲ್ಲಿ ಆರ್.ಎಸ್. ಪಾಟೀಲ, ಮಾಂತೇಶ ಅಕ್ಕೂರ, ಭುವನೇಶ್ವರಿ ಅಂಗಡಿ, ಐ.ಬಿ. ಒಂಟೇಲಿ, ಜಯಶ್ರೀ ಪಟ್ಟಣಶೆಟ್ಟಿ, ಕಳಕಪ್ಪ ಜಲ್ಲಿಗೇರಿ, ಎಸ್.ಎಸ್. ಪೂಜಾರ, ಶಿವಾನಂದ ಹುನಗುಂಡಿ, ಚೈತ್ರಾ ಯಾಳಗಿ, ಬಿ.ಎಸ್. ಹಿಂಡಿ, ವಿರೂಪಮ್ಮ ಹಿರೇಮಠ, ಕಸ್ತೂರಿ ಕಡಗದ, ಈರಮ್ಮ ಕುಂದಗೋಳ, ಸ್ವರಾ ಬೀರನೂರ, ಮೇಘಾ ಬೆಳದಡಿ, ಹುಚ್ಚೀರಪ್ಪ ಈಟಿ, ವಿಶ್ವನಾಥ ಆದಿ, ನೀಲಪ್ಪ ಐಹೊಳಿ, ವಿಜಯಲಕ್ಷ್ಮೀ ಪಾಗದ, ಈರಣ್ಣ ಹೂಗಾರ, ಸಂತೋಷ ಚಿಜ್ಜೇರಿ, ಪ್ರೇಮಾ ಶಿರಹಟ್ಟಿ, ಯಶವಂತ ಬಿಷ್ಟಕ್ಕನವರ, ಅನ್ನಪೂರ್ಣ ಕುರಿ, ರುಕ್ಸಾರ್ ಕೊಪ್ಪಳ, ಜಿ.ಎನ್. ಪಾಟೀಲ, ವಿಜಯಲಕ್ಷ್ಮೀ ಬಂಡಿವಾಡ, ಸಂಗೀತಾ ಪೂಜಾರ, ಶೃತಿ ಅಳಗೋಡಿ, ಪ್ರೇರಣಾ ಅಂಗಡಿ, ಲಕ್ಷ್ಮೀ ಕೆ. ನಿಖಿತಾ ಜೆ ಮೊದಲಾದವರು ಕವನ ವಾಚಿಸಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಡಿ.ವಿ. ಬಡಿಗೇರರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅನ್ನದಾನಿ ಹಿರೇಮಠ, ಬಸವರಾಜ ಗಣಪ್ಪನವರ, ಸಿ.ಎಂ. ಮಾರನಬಸರಿ, ಬಸವರಾಜ ವಾರಿ, ವಿಠ್ಠಲ ಕೋಳಿ, ರಾಮಚಂದ್ರ ಪಡೇಸೂರ, ನಿಂಗಮ್ಮ ಗದಗ, ಶಶಿಕಾಂತ ಕೊರ್ಲಹಳ್ಳಿ, ಅಮರೇಶ ರಾಂಪೂರ, ಆರ್.ಡಿ. ಕಪ್ಪಲಿ ಮೊದಲಾದವರು ಭಾಗವಹಿಸಿದ್ದರು.
ಡಾ. ಅಂದಯ್ಯ ಅರವಟಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಹಿತಿ ಜನಪರ ಮತ್ತು ಜೀವಪರ ಆಶಯಗಳನ್ನು ಇಟ್ಟುಕೊಂಡು ಬರವಣಿಗೆಯಲ್ಲಿ ತೊಡಗಬೇಕು. ಪ್ರಜಾಪ್ರಭುತ್ವ ಮೌಲ್ಯಗಳನ್ನು ಕವಿ ಮತ್ತು ಕಾವ್ಯ ಒಳಗೊಂಡಿರಬೇಕು. ಧಾವಂತದಲ್ಲಿ ಸೃಷ್ಟಿಸುವ ಕಾವ್ಯ ಬಹುಕಾಲ ನಿಲ್ಲುವುದಿಲ್ಲ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here