35 ವರ್ಷದ ಮಹಿಳೆ ಜೊತೆ ಮದುವೆಯಾದ ಮರುದಿನವೇ ಕೊನೆಯುಸಿರೆಳೆದ 75ರ ವೃದ್ಧ.!

0
Spread the love

ಲಕ್ನೋ: ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನ ಅನುಭವಿಸುತ್ತಿದ್ದ 75 ವರ್ಷದ ಸಂಗ್ರರಾಮ್ ಎಂಬುವವರು 35 ವರ್ಷದ ಮಹಿಳೆಯನ್ನು ಮದುವೆಯಾಗಿದ್ದರು. ಮದುವೆಯಾಗಿ ಮರುದಿನವೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜೌನ್‌ಪುರ ಜಿಲ್ಲೆಯ ಕುಚ್‌ಮುಚ್ ಗ್ರಾಮದಲ್ಲಿ ನಡೆದಿದೆ.

Advertisement

ಹೌದು ವೃದ್ಧನು ಒಂದು ವರ್ಷದ ಹಿಂದೆ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದನು. ಅಂದಿನಿಂದ ಒಂಟಿಯಾಗಿದ್ದ. ವೃದ್ಧನಿಗೆ ಮಕ್ಕಳಿರಲಿಲ್ಲ. ಜೊತೆಗೆ ಯಾರಾದರು ಇರಬೇಕೆಂಬ ಆಶಯದೊಂದಿಗೆ ತನಿಗಿಂತ ಅರ್ಧ ವಯಸ್ಸಿನ ಕಿರಿಯವಳನ್ನು ವಿವಾಹವಾಗಿದ್ದ. ಆದರೆ, ಮದುವೆಯಾದ ಮಾರನೇ ದಿನವೇ ವೃದ್ಧಿ ಸಾವನ್ನಪ್ಪಿದ್ದಾನೆ. ಅವರ ಕುಟುಂಬದವರು ಮರುಮದುವೆಯಾಗದಂತೆ ಸಲಹೆ ನೀಡಿದ್ದರು,

ಅದರಂತೆ ಜಲಾಲ್ಪುರ ಪ್ರದೇಶದ ನಿವಾಸಿ 35 ವರ್ಷದ ಮನ್ಭವತಿ ಅವರನ್ನು ವಿವಾಹವಾದರು. ಸ್ಥಳೀಯ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ಜೋಡಿ ಮದುವೆಯಾದರು.

ಮದುವೆ ಬಳಿಕ ಮನ್ಭವತಿ, ನನ್ನ ಪತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಮನೆಯ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ಮದುವೆಯ ಮೊದಲ ರಾತ್ರಿ ಇಬ್ಬರೂ ಒಟ್ಟಿಗೆ ಸಮಯ ಕಳೆದಿದ್ದರು.ಆದರೆ, ಬೆಳಗ್ಗೆ ಹೊತ್ತಿಗೆ ಸಂಗ್ರರಾಮ್ ಅವರ ಆರೋಗ್ಯ ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ವೃದ್ಧ ಮೃತಪಟ್ಟಿದ್ದರು. ಈ ಹಠಾತ್ ಸಾವು ಗ್ರಾಮದಲ್ಲಿ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.


Spread the love

LEAVE A REPLY

Please enter your comment!
Please enter your name here