ಕೈಗೆ ಹಗ್ಗ ಕಟ್ಟಿದ್ದ ಸ್ಥಿತಿಯಲ್ಲಿ ಬಾಲಕಿ ಶವ ನೀರಿನ ಟ್ಯಾಂಕ್’ನಲ್ಲಿ ಪತ್ತೆ

0
Spread the love

ಹೈದರಾಬಾದ್:- ಏಳು ವರ್ಷದ ಬಾಲಕಿಯ ಶವ ಮನೆಯ ತಾರಸಿಯಲ್ಲಿರುವ ನೀರಿನ ಟ್ಯಾಂಕ್​ನಲ್ಲಿ ಪತ್ತೆಯಾಗಿರುವ ಘಟನೆ ಹೈದರಾಬಾದ್ ನಲ್ಲಿ ಜರುಗಿದೆ. ಹುಮೇನಿ ಸುಮಯ್ಯ ಎಂಬ ಬಾಲಕಿ ತನ್ನ ಹೆತ್ತವರಾದ ಮೊಹಮ್ಮದ್ ಅಜೀಂ ಮತ್ತು ಶಬಾನಾ ಬೇಗಂ ಅವರೊಂದಿಗೆ ತನ್ನ ಅಜ್ಜಿಯನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದಳು.

Advertisement

ಮಂಗಳವಾರ ಸಂಜೆ ಸುಮಯ್ಯ ನಾಪತ್ತೆಯಾಗಿದ್ದಾರೆಂದು ವರದಿಯಾಗಿದ್ದು, ಆಕೆಯ ಕುಟುಂಬ ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಹಲವಾರು ಪೊಲೀಸ್ ತಂಡಗಳು, ತನಿಖಾಧಿಕಾರಿಗಳು ಮತ್ತು ಕಾಳಜಿ ವಹಿಸಿದ ನೆರೆಹೊರೆಯವರನ್ನು ಒಳಗೊಂಡ ರಾತ್ರಿಯಿಡೀ ಹುಡುಕಾಟ ನಡೆಸಿದರೂ ಹುಡುಗಿ ಪತ್ತೆಯಾಗಲಿಲ್ಲ.

ಬುಧವಾರ ಮಧ್ಯಾಹ್ನ ಸುಮಯ್ಯಳ ತಾಯಿ ಅಂತಿಮವಾಗಿ ಅಜ್ಜಿಯ ಮನೆಯ ತಾರಸಿ ಮೇಲೆ ಹೋಗಿ ಟ್ಯಾಂಕ್ ಪರೀಕ್ಷಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಛಾವಣಿಯ ನೀರಿನ ಟ್ಯಾಂಕ್ ಒಳಗೆ ಬಾಲಕಿ ನಿರ್ಜೀವ ದೇಹವು ತೇಲುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದರು.

ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಲಾಯಿತು. ಘಟನಾ ಸ್ಥಳವನ್ನು ಪರೀಕ್ಷಿಸಿದ ತನಿಖಾಧಿಕಾರಿಗಳು, ಬಾಲಕಿಯ ಕೈಗಳನ್ನು ಬೆನ್ನ ಹಿಂದೆ ಕಟ್ಟಲಾಗಿತ್ತು ಎಂಬುದನ್ನು ದೃಢಪಡಿಸಿದರು. ಈ ವಿವರವು ಆಕೆ ತಾನೇ ಟ್ಯಾಂಕ್ ಒಳಗೆ ಬಿದ್ದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೆ ಈ ಘಟನೆ ಹಿಂದೆ ಯಾರ ಪಿತೂರಿ ಇದೆ ಎಂಬುದು ಇನ್ನೂ ತಿಳಿದುಬಂದಿಲ್ಲ.


Spread the love

LEAVE A REPLY

Please enter your comment!
Please enter your name here