ಮಡಿಕೇರಿ ದಸರಾ ಮಹೋತ್ಸವದಲ್ಲಿ ಗದ್ದಲ: ಮಂಟಪ ಸಮಿತಿ ಯುವಕರಿಂದ ಪೊಲೀಸರ ಮೇಲೆ ಹಲ್ಲೆ

0
Spread the love

ಕೊಡಗು:- ಮೈಸೂರಿನಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ನಡೆಯುವಂತೆ ಕೊಡಗಿನ ಮಡಿಕೇರಿ ದಸರಾ ಆಚರಣೆಯೂ ಅಷ್ಟೇ ಪ್ರಸಿದ್ಧಿ.

Advertisement

ಆದರೆ ಇದೇ ಮಡಿಕೇರಿ ದಸರಾ ಮಹೋತ್ಸವದಲ್ಲಿ ಗದ್ದಲ ಉಂಟಾಗಿದೆ. ಮಂಟಪ ಸಮಿತಿಯವರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ದಶಮಂಟಪದ ಬಹುಮಾನದಲ್ಲಿ ಗೊಂದಲ ಉಂಟಾಗಿ ಮಂಟಪ ಸಮಿತಿಯಿಂದ ಮುಖ್ಯ ವೇದಿಕೆಯಲ್ಲಿ ಕೋಲಾಹಲ ಉಂಟಾಗಿತ್ತು. ಈ ವೇಳೆ ಲಾಠಿ ಬೀಸಿ ಮಂಟಪ ಸಮಿತಿಯವರನ್ನು ಪೋಲೀಸರು ಚದುರಿಸಿದರು.

ಎಸ್, ಬಹುಮಾನ ದಲ್ಲಿ ತಾರತಮ್ಯ ಆರೋಪ ಹಿನ್ನೆಲೆ ಮಡಿಕೇರಿ ದಸರಾ ವೇದಿಕೆಯಲ್ಲಿ ಕೋಲಾಹಲವೇ ಸೃಷ್ಟಿ ಆಗಿತ್ತು. ಬಹುಮಾನ ದಲ್ಲಿ ತಾರತಮ್ಯ ಆರೋಪ ಹಿನ್ನೆಲೆ ವೇದಿಕೆ ಮೇಲೆ ಗದ್ದಲದ ಗೂಡಾಗಿತ್ತು. ಅಲ್ಲದೇ ಡಿವೈಎಸ್ ಪಿ ಮೇಲೆ ಮಂಟಪ ಸಮಿತಿಯ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.

ಹಲ್ಲೆಯಿಂದ ಡಿವೈಎಸ್ ಪಿ ಸೂರಜ್ ತೀವ್ರಗಾಯಗೊಂಡಿದ್ದಾರೆ. ಅಲ್ಲದೇ ಇತರ ಪೊಲೀಸ್ ಸಿಬ್ಬಂದಿ ಮೇಲೆ ಯುವಕರು ಹಲ್ಲೆ ನಡೆಸಿದರು. ಒಟ್ಟಾರೆ ಮಡಿಕೇರಿ ದಸರಾ ವೇದಿಕೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು.


Spread the love

LEAVE A REPLY

Please enter your comment!
Please enter your name here