ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಎರಡನೇ ಭಾರಿ ಜೈಲು ಸೇರಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ನಿತ್ಯವೂ ಕಷ್ಟದಲ್ಲೇ ಜೀವನ ನಡೆಸುತ್ತಿದ್ದಾರೆ. ಇದೀಗ ಜೈಲಿನಲ್ಲಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಭೇಟಿಯಾಗಿದ್ದಾರೆ. ಪತಿ ಜೈಲಿನಲ್ಲಿ ಅನುಭವಿಸ್ತಿರುವ ಕಷ್ಟಗಳನ್ನು ನೋಡಿ ಪತ್ನಿ ವಿಜಯಲಕ್ಷ್ಮೀ ಕಣ್ಣೀರಿಟ್ಟಿದ್ದು ಇದೇ ವೇಳೆ ದರ್ಶನ್ ಜೈಲಿಗೆ ಬರಬೇಡ ಎಂದು ಪತ್ನಿಗೆ ಹೇಳಿದ್ದಾರೆ.
ಹೊರಗಿದ್ದ ವೇಳೆ ನಿತ್ಯವೂ ದೇಹವನ್ನು ದಂಡಿಸುತ್ತಿದ್ದ ದರ್ಶನ್ ಗೆ ಜೈಲು ಜೀವನ ಸಾಕಷ್ಟು ಕಷ್ಟವಾಗುತ್ತಿದೆ. ದೇಹಕ್ಕೆ ಬೇಕಾದ ವ್ಯಾಯಾಮ, ಮೆತ್ತಗಿನ ಹಾಸಿಗೆ ದಿಂಬಿಲ್ಲದೆ ದರ್ಶನ್ ಪರಿತಪಿಸುತ್ತಿದ್ದಾರೆ. ಇದರ ಜೊತೆಗೆ ಕೂರಲು ಕುರ್ಚಿಯೂ ಇಲ್ಲದೆ ಪರಡಾಡುತ್ತಿದ್ದಾರೆ. ತಮ್ಮ ಕಷ್ಟಕ್ಕೆ ಪತ್ನಿ ಕಣ್ಣೀರು ಹಾಕುವುದು ನೋಡಿ ದರ್ಶನ್ ಮತ್ತಷ್ಟು ಕೊರಗುತ್ತಿದ್ದಾರೆ.
ಪತ್ನಿಯ ಕಣ್ಣೀರು ನೋಡಿದ ದರ್ಶನ್, ನೀನು ಜೈಲಿಗೆ ಬರೋಕೆ ಹೋಗಬೇಡ. ನನ್ನ ಹಣೆ ಬರಹ ಇದ್ದಂಗೆ ಆಗುತ್ತೆ. ಸಾಮಾನ್ಯ ಎಂಟ್ರಿ ಮಾಡಿಸಿ ಬರಲು ಗಂಟೆಗಟ್ಟಲೇ ವೈಯ್ಟ್ ಮಾಡಬೇಕಾಗುತ್ತದೆ. ಅದಕ್ಕೆ ನೀನು ಬರಬೇಡ ಎಂದು ಹೇಳಿದ್ದಾರೆ ಎಂದು ಜೈಲು ಸಿಬ್ಬಂದಿ ಹೇಳಿದ್ದಾರೆ.
ಇನ್ನೂ ಜೈಲಲ್ಲಿ ಸಹ ಆರೋಪಿಗಳಿಗೆ ಎತ್ತಿಕಟ್ಟಿದ ಆರೋಪವೂ ಕೇಳಿಬಂದಿದೆ. ಅದೇ ಕಾರಣಕ್ಕೆ ಜೈಲಲ್ಲಿ ಕೈದಿಗಳ ಜೊತೆ ದರ್ಶನ್ ಸ್ನೇಹ ಅಷ್ಟಕ್ಕಷ್ಟೇ ಇದೆ. ದರ್ಶನ್ ಏನೂ ಉಪಯೋಗಕ್ಕೆ ಬರ್ತಿಲ್ಲ ಎಂದು ಸಹ ಆರೋಪಿಗಳು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಎರಡನೇ ಬಾರಿಗೆ ಜೈಲು ಸೇರಿರುವ ದರ್ಶನ್ ಸಂಕಷ್ಟದ ಮೇಲೆ ಸಂಕಷ್ಟ ಅನುಭವಿಸ್ತಿದ್ದಾರೆ.