ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮುಳಗುಂದ ನಾಕಾ ಬಳಿಯ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ಪ್ರತಿ ತಿಂಗಳ ಮೊದಲ ಮಂಗಳವಾರ ಶಿವಾನುಭವ ನಡೆಯಲಿದ್ದು, ಶ್ರೀಮಠದಲ್ಲಿ ಜರುಗಿದ ಭಕ್ತರ ಸಭೆಯಲ್ಲಿ 2025-26ನೇ ಸಾಲಿನ ಶಿವಾನುಭವ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಶ್ರೀ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿಗಳಾದ ವೇದಮೂರ್ತಿ ಮಹೇಶ್ವರ ಸ್ವಾಮಿಗಳು ಸಭೆಯ ಸಾನ್ನಿಧ್ಯ ವಹಿಸಿದ್ದರು. ಶಿವಾನುಭವ ಸಮಿತಿ ಅಧ್ಯಕ್ಷರಾಗಿ ಡಾ. ರಾಜೇಂದ್ರ ಗಡಾದ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಭುಗೌಡ ಪಾಟೀಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗುರಪ್ಪ ನಿಡಗುಂದಿ, ಕೋಶಾಧ್ಯಕ್ಷರಾಗಿ ಸಿದ್ಧಣ್ಣ ಜವಳಿ ನೇಮಕಗೊಂಡಿದ್ದಾರೆ.
ಗೌರವಾನ್ವಿತ ಸದಸ್ಯರಾಗಿ ಬಿ.ಎಂ. ಬಿಳೆಯಲಿ, ಬಿ.ಬಿ. ಪಾಟೀಲ, ಪ್ರೊ. ಕೆ.ಎಚ್. ಬೇಲೂರ, ಬಿ.ಡಿ. ಕಿಲಬನವರ, ಎಲ್.ಎಸ್. ನೀಲಗುಂದ, ಸಿ.ಬಿ. ಹಿರೇಮಠ, ಜಿ.ಎಂ. ಯಾನಮಶೆಟ್ಟಿ, ಕೆ.ವಿ. ಹಿರೇಮಠ, ಎಸ್.ಎಸ್. ಪಾಟೀಲ (ಅರಹುನಸಿ), ಪ್ರಕಾಶ ಬಂಡಿ, ಬಸವರಾಜ ಸಂಕನೂರ, ಎಸ್.ಪಿ. ಹಿರೇಮಠ, ಬಿ.ಎಚ್. ಗರಡಿಮನಿ, ಗೌರವಾನ್ವಿತ ಸದಸ್ಯೆಯರಾಗಿ ಸುಶೀಲಾ ಜಿ. ಕೋಟಿ, ಶಾಂತಾಬಾಯಿ ಬಾಕಳೆ, ಕಸ್ತೂರಿಬಾಯಿ ಭಾಂಡಗೆ, ಗೀತಾ ಹೂಗಾರ ಅವರನ್ನು ನೇಮಕ ಮಾಡಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.