HomeGadag Newsರಾಷ್ಟೀಯ ಯೋಗಾಸನ ಚಾಂಪಿಯನ್‌ಶಿಪ್‌ಗೆ ಆಯ್ಕೆ

ರಾಷ್ಟೀಯ ಯೋಗಾಸನ ಚಾಂಪಿಯನ್‌ಶಿಪ್‌ಗೆ ಆಯ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಯೋಗ ಫೆಡರೇಶನ್ ಆಫ್ ಇಂಡಿಯಾ ಪಂಚಕುಲ (ಹರ್ಯಾಣ) ಇವರು ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಬೆಂಗಳೂರು, ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಯೋಗ ಸ್ಪೋರ್ಟ್ಸ್ ಫೌಂಡೇಶನ್, ಗ್ಲೋಬಲ್ ಫೋರಂ ಮೈಸೂರು ಇವರುಗಳ ಸಹಯೋಗದಲ್ಲಿ 09-10-2025ರಿಂದ 12-10-2025ರವರೆಗೆ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿರುವ 50ನೇ ಹಿರಿಯರ ರಾಷ್ಟೀಯ ಯೋಗಾಸನ ಚಾಂಪಿಯನ್‌ಶಿಪ್ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯ ತಂಡದಿಂದ ಭಾಗವಹಿಸಲು ಗದಗ ಜಿಲ್ಲೆಯಿಂದ ಯಶವಂತ ಮತ್ತೂರ (45 ವರ್ಷ ಮೇಲ್ಪಟ್ಟ ಪುರುಷರ ವಿಭಾಗ), ಸಂಜನಾ ವಿ. ಸಜ್ಜನರ (21 ರಿಂದ 25 ವರ್ಷದ ಮಹಿಳೆಯರ ವಿಭಾಗ) ಮತ್ತು ಕೆ.ಎಸ್. ಪ್ರಸಾದ್ (30 ವರ್ಷ ಮೇಲ್ಪಟ್ಟ ಪ್ರೊಫೆಶನಲ್ (ರೆಫರಿ) ವಿಭಾಗ) ಇವರು ರಾಜ್ಯಮಟ್ಟದಲ್ಲಿ ಸ್ಥಾನ ಗಳಿಸಿ ಆಯ್ಕೆಯಾಗಿದ್ದಾರೆ.

50ನೇ ರಾಷ್ಟೀಯ ಯೋಗಾಸನ ಚಾಂಪಿಯನ್‌ಶಿಪ್ ಸ್ಪರ್ಧೆಗೆ ಆಯ್ಕೆಯಾಗಿರುವ ಯೋಗಾಸನ ಕ್ರೀಡಾಪಟುಗಳಿಗೆ ಗದಗ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷರಾದ ಎಂ.ಎಸ್. ಶಿರಿಯಣ್ಣವರ, ಸದಸ್ಯರಾದ ಡಾ. ಎಂ.ವಿ. ಐಹೊಳ್ಳಿ, ಐ.ಬಿ. ಕೊಟ್ಟೂರಶೆಟ್ಟಿ, ವಿ.ಎಂ. ಮುಂದಿನಮನಿ, ವಿಜಯಲಕ್ಷ್ಮೀ ಆನೆಹೊಸೂರ, ಸುನಂದಾ ಜ್ಯಾನೋಪಂತರ ಮುಂತಾದವರು ಶುಭ ಹಾರೈಸಿದ್ದಾರೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!