ಬೆಂಗಳೂರು: ನಗರದ ಚಾಮರಾಜಪೇಟೆ ಮುಖ್ಯರಸ್ತೆಯ ನಯಾರಾ ಪೆಟ್ರೋಲ್ ಬಂಕ್ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಿನಿ ಟ್ರಕ್ವೊಂದು ಪೆಟ್ರೋಲ್ ಬಂಕ್ಗೆ ನುಗ್ಗಿದ ಘಟನೆ ಜರುಗಿದೆ. ಸನ್ಪ್ಯೂರ್ ಎಣ್ಣೆ ಸಾಗಾಟ ಮಾಡುತ್ತಿದ್ದ ಟ್ರಕ್ ನುಗ್ಗಿದ ಪರಿಣಾಮ ಪೆಟ್ರೋಲ್ ಬಂಕ್ನ ಶೌಚಾಲಯದ ಕಟ್ಟಡ ಜಖಂಗೊಂಡಿದೆ.
ಅಲ್ಲದೇ ಡಿಕ್ಕಿಯ ರಭಸಕ್ಕೆ ಒಂದು ಬೈಕ್ ಕೂಡ ಲಾರಿಯಡಿಗೆ ಸಿಲುಕಿ ಸಂಪೂರ್ಣ ಜಖಂಗೊಂಡಿದೆ. ಅಲ್ಲದೇ ಡಿಕ್ಕಿಯ ರಭಸಕ್ಕೆ ಒಂದು ಬೈಕ್ ಕೂಡ ಲಾರಿಯಡಿಗೆ ಸಿಲುಕಿ ಸಂಪೂರ್ಣ ಜಖಂಗೊಂಡಿದೆ.ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಆಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



