HomeGadag Newsಕುಟುಂಬ ಕಲಹ: ಪತ್ನಿಯನ್ನು ಭೀಕರವಾಗಿ ಕೊಲೆಗೈದ ಕಂಡಕ್ಟರ್!

ಕುಟುಂಬ ಕಲಹ: ಪತ್ನಿಯನ್ನು ಭೀಕರವಾಗಿ ಕೊಲೆಗೈದ ಕಂಡಕ್ಟರ್!

For Dai;y Updates Join Our whatsapp Group

Spread the love

ಗದಗ: ಕುಟುಂಬ ಕಲಹದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಕಂಡಕ್ಟರನೊಬ್ಬ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಗದಗ ತಾಲೂಕಿನಲ್ಲಿ ಜರುಗಿದೆ.

ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ಮನೆಯಲ್ಲಿ ಈ ಘಟನೆ ನಡೆದಿದ್ದು, ಬೀಸುವ ಕಲ್ಲು ತಲೆ ಮೇಲೆ ಎತ್ತಿ ಹಾಕಿ ನಂತರ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕಳೆದ ಹಲವು ದಿನಗಳಿಂದ ಗಂಡ ಹೆಂಡತಿ ನಡುವೆ ಆಗಾಗ ಕಲಹ ಉಂಟಾಗುತ್ತಿತ್ತು ಎನ್ನಲಾಗಿದ್ದು, ಇಂದು ಊಟ ಮಾಡಿದ ನಂತರ ಮಕ್ಕಳು ಮನೆಯ ಹೊರಗೆ ಆಟವಾಡಲು ಹೋಗಿದ್ದಾಗ ಸ್ವಾತಿಯ ಕೊಲೆಯಾಗಿದೆ.

ಸ್ವಾತಿ ಅಲಿಯಾಸ್ ಯಲ್ಲವ್ವ (42) ಭೀಕರವಾಗಿ ಕೊಲೆಗೀಡಾದ ಮಹಿಳೆ. ಗದಗ ಸಾರಿಗೆ ಘಟಕದಲ್ಲಿ ಕಂಡಕ್ಟರ್‌ನಾಗಿ ಕಾರ್ಯನಿರ್ವಹಿಸುವ ರಮೇಶ್ ಬೂದಪ್ಪ ನರಗುಂದ ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಅಡಿಗೆ ಮನೆ ರಕ್ತಸಿಕ್ತವಾಗಿದ್ದು, ಸ್ಥಳೀಯರು ಈ ದೃಶ್ಯ ನೋಡಿ ದಂಗಾಗಿದ್ದು, ಸುದ್ದಿ ತಿಳಿದು ಎಸ್ಪಿ ರೋಹನ್ ಜಗದೀಶ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!