ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದು ಹೀನ ಕೃತ್ಯ ಎಸಗಿದವರ ಮೇಲೆ ಉಗ್ರ ಕ್ರಮ ಕೈಗೊಳ್ಳುವಂತೆ ಗದಗ ಜಿಲ್ಲಾ ವಕೀಲರ ಸಂಘದ ವತಿಯಿಂದ ಗದಗ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷರಾದ ಆರ್ ಜಿ. ಕಲ್ಲೂರ ಮಾತನಾಡಿ, ಅ.6ರಂದು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್. ಗವಾಯಿ ಇವರ ಮೇಲೆ ರಾಕೇಶ್ ಕಿಶೋರ್ ಎಂಬ ವಕೀಲರು ಶೂ ಎಸೆಯಲು ಪ್ರಯತ್ನಿಸಿರುವುದು ನಿಜಕ್ಕೂ ಕಳವಳಕಾರಿ ಮತ್ತು ಖಂಡನೀಯ ವಿಚಾರ. ಇದನ್ನು ಗದಗ ಜಿಲ್ಲಾ ವಕೀಲರ ಸಂಘವು ಉಗ್ರವಾಗಿ ಖಂಡಿಸುತ್ತದೆ. ಇಂತಹ ಹೀನ ಕೃತ್ಯ ಎಸಗಿದವರ ವಿರುದ್ಧ ಶೀಘ್ರವಾಗಿ ಉಗ್ರ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಮ್.ಎನ್. ನಾಯ್ಕರ, ಉಪಾಧ್ಯಕ್ಷರಾದ ಎಂ.ಎ. ಸಂಗನಾಳ, ವಕೀಲರಾದ ಮೋಹನ ಭಜಂತ್ರಿ, ಶ್ರೀಕಾಂತ ದೊಡ್ಡಮನಿ, ಸಿ.ಆರ್. ವಡಕಣ್ಣವರ, ಜಿ.ಪಿ. ಪವಾರ, ಶೈಲಾ ಹಿರೇಮಠ, ವಿಲಾಸ ಕೊಪ್ಪಳ, ವೈ.ಡಿ. ತಳವಾರ, ಎಂ.ಎ. ಮೌಲ್ವಿ, ಎಸ್.ಎಫ್. ದೊಡ್ಡಮನಿ, ಎನ್.ಬಿ. ಬಿಚ್ಚಗತ್ತಿ ಸೇರಿದಂತೆ ಗದಗ ಜಿಲ್ಲೆಯ ವಕೀಲರ ಸಂಘದ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.



