ಮಡಿಕೇರಿ:- ಇಲ್ಲಿನ ಕಾಟಗೇರಿ ಹರ್ ಮಂದಿರ್ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಓರ್ವ ವಿದ್ಯಾರ್ಥಿ ಸಜೀವ ದಹನ ಆಗಿರುವ ಘಟನೆ ಜರುಗಿದೆ.
ಚೆಟ್ಟಿಮಾನಿ ಗ್ರಾಮದ ನಿವಾಸಿ 7 ವರ್ಷದ ಪುಷ್ಪಕ್ ಮೃತ ವಿದ್ಯಾರ್ಥಿ. ಇಂದು ಬೆಳ್ಳಗ್ಗಿನ ಜಾವ ಈ ಅವಘಡ ಸಂಭವಿಸಿದೆ. ಮಡಿಕೇರಿ ಅಗ್ನಿ ಶಾಮಕ ಹಾಗೂ ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಗ್ರಾಮಾಂತರ ಪೊಲೀಸ್ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಫೈಯರ್ ಬ್ರಿಗೇಡ್ ಅಧಿಕಾರಿಯಾದ ನಾಗರಾಜ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.



