ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಜೋಡ ಮಾರುತಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಯಶವಂತ ಕಾಂಬ್ಳೆಕರ್ ಮಾತನಾಡಿ, ವಾಲ್ಮೀಕಿಯವರ ರಾಮಾಯಣದಿಂದ ಜಗತ್ತಿಗೆ ಪ್ರಭು ಶ್ರೀರಾಮಚಂದ್ರ, ಲಕ್ಷ್ಮಣ, ಸೀತಾದೇವಿ, ಹನುಮಂತ ಹಲವಾರು ದೇವತೆಗಳ ಪರಿಚಯವಾಯಿತು. ರಾಮಾಯಣ ಕೇವಲ ಕಥಾ ಹಂದರವಲ್ಲ. ಜಗತ್ತಿಗೆ ಒಳಿತು–ಕೆಡುಕುಗಳ ಹಾಗೂ ದುಷ್ಟಶಕ್ತಿಯ ದಮನಕ್ಕೆ ಶಿಷ್ಟರ ರಕ್ಷಣೆಗೆ ಅವತಾರ ತಾಳಿದ ಪ್ರಭು ಶ್ರೀರಾಮಚಂದ್ರನ ಅವತಾರ ಇಂದಿಗೂ ಮಾದರಿಯಾಗಿದೆ. ವಾಲ್ಮೀಕಿ, ಬುದ್ಧ, ಬಸವ, ಅಂಬೇಡ್ಕರರಂತಹ ಹಲವಾರು ಮಹಾನ್ ವ್ಯಕ್ತಿಗಳು ಕೇವಲ ಜಾತಿಗೆ ಸೀಮಿತರಾಗಿಲ್ಲ. ಜಗತ್ತಿನ ಎಲ್ಲ ಸಮುದಾಯದವರು ಅವರ ಬದುಕು, ಬರಹ, ಮಾರ್ಗದರ್ಶನ ಇಂದಿಗೂ ಅನುಕರಣೀಯವಾಗಿದೆ. ಹೀಗಾಗಿ ಇಂತಹ ದಾರ್ಶನಿಕರ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಶ್ರೀನಿವಾಸ ಹುಬ್ಬಳ್ಳಿ ಸ್ವಾಗತಿಸಿದರು. ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಶ್ರೀಧರ್ ಕುಲಕರ್ಣಿ, ಉಪಾಧ್ಯಕ್ಷ ವೀರಣ್ಣ ಹೇಮಾದ್ರಿ, ಮಾರುತಿ ಪವಾರ, ರತ್ನಾ ಹೇಮಾದ್ರಿ, ಬಸವರಾಜ ಕುರಗೋಡ, ಕಲ್ಮೇಶ್ವರಯ್ಯ ಹಿರೇಮಠ, ಜಗದೀಶ ಪೂಜಾರ, ಚಂದ್ರು ಮುಂಡರಗಿ, ಪ್ರಶಾಂತ ನಾಯ್ಕರ, ಸುಂದರರಾಜ ಉಪಸ್ಥಿತರಿದ್ದರು.
ಕಾರ್ಯದರ್ಶಿಗಳಾದ ವೀರೇಶ ಮಡಿವಾಳರ ವಂದನಾರ್ಪಣೆ ಮಾಡಿದರು.