ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸುವುದು ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದು ಶಿಕ್ಷಕ ಜಗದೇವಯ್ಯಸ್ವಾಮಿ ನರೇಗಲ್‌ಮಠ ಹೇಳಿದರು.
ತಾಲೂಕಿನ ನಾಗಾವಿ ಗ್ರಾಮದ ಸೋಮೇಶ್ ಹಿರೇಮಠ ಪ್ರತಿಷ್ಠಾನದ ವತಿಯಿಂದ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಯುವ ಮುಖಂಡ ಅನಿಲ್ ಮೆಣಸಿನಕಾಯಿಯವರ ಜನ್ಮದಿನ ಆಚರಣೆ, ನಾಗಾವಿಯ ಜಲಾಶಂಕರ ದೇವರ ಭಕ್ತಿಗೀತೆಯ ವಿಡಿಯೋ ಚಿತ್ರೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಣ್ಣೆಯ್ಯ ಹಿರೇಮಠ ಅವರ ಸಾರಥ್ಯದಲ್ಲಿ ಗದಗ ಜಿಲ್ಲೆಯಲ್ಲಿ ನಾಗಾವಿ ನಾನಾ ಎಂಬ ಯುಟ್ಯೂಬ್ ಚಾನೆಲ್ ಆರಂಭಿಸಿ, ತಮ್ಮ ಶಕ್ತಿಮೀರಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ, ಲಕ್ಷಾಂತರ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ ಎಂದು ಹೇಳಿದರು.
ಗ್ರಾ.ಪಂ ಸದಸ್ಯ ಅಲ್ಲಾಸಾಬ ಪೀರಖಾನವರ ಕಾರ್ಯಕ್ರಮ ಉದ್ಘಾಟಿಸಿದರು. ಕಳಸಾಬಂಡೂರಿ ಹೋರಾಟ ಸಮಿತಿಯ ಗದಗ ಜಿಲ್ಲಾಧ್ಯಕ್ಷ ವಸಂತ ಪಡಗದ ಮಾತನಾಡಿದರು. ನಾಗಾವಿ ಗಂಗಾಧರೇಶ್ವರ ಮಠದ ವೇ.ಮೂ ಮೃತ್ಯುಂಜಯ ಸ್ವಾಮೀಜಿ ಹಿರೇಮಠ ಸಮ್ಮುಖ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚನಬಸಪ್ಪ ಮಡಿವಾಳರ, ಚನ್ನಪ್ಪ ಅಕ್ಕಿ, ಉಳವಪ್ಪ ಮಡಿವಾಳರ, ಶರಣಪ್ಪ ಕಮಡೊಳ್ಳಿ, ಪ್ರಭುದೇವಗೌಡ ಪಾಟೀಲ, ಯಮನೂರಸಾಬ ನದಾಫ್, ಶಾರಮ್ಮ ಪಾಟೀಲ, ಶಂಕ್ರಮ್ಮ ಹಿರೇಮಠ, ವಿಶಾಲಾಕ್ಷಿ ಪಾಟೀಲ, ಕಾವ್ಯಾ ಪಾಟೀಲ, ನಿವೇದಿತಾ ಪಾಟೀಲ, ಅನಿತ ಬೆನಕನಾಳಮಠ ಮುಂತಾದವರು ಪಾಲ್ಗೊಂಡಿದ್ದರು.
ನಾಗಾವಿ ನಾನಾ ಯುಟ್ಯೂಬ್ ಹೆಸರಿಗೆ ಪ್ರೇರಣೆಯಾದ ಕಿರಣಗೌಡ ಪಾಟೀಲ, ಅಶ್ವಿನಿ ಪಾಟೀಲ, ಕುಮಾರಗೌಡ ಪಾಟೀಲ, ರಕ್ಷಿತಾ ಪಾಟೀಲ ದಂಪತಿ, ಜಲಾಶಂಕರ ಭಕ್ತಿಗೀತೆಗೆ ಪ್ರೇರಣೆಯಾದ ಜಗದೇವಯ್ಯ ನರೇಗಲ್‌ಮಠ, ಸಹಕಾರಿಗಳಾದ ವಸಂತ ಪಡಗದ, ಶಿವಾನಂದ ಮಠದ, ಹೀರಾಲಾಲ ಸಿದ್ಲಿಂಗ್, ಮಹೇಶ ದಾಸರ, ಅಂಬರೇಶ ಕೆಂಚಹಳ್ಳಿ, ಪ್ರಶಾಂತ ಮುಂಡರಗಿ, ಶರಣಪ್ಪ ಕಮಡೊಳ್ಳಿ, ಗುರಸಿದ್ದಪ್ಪ ಮಡಿವಾಳರ, ಧೀರಜ್ ನಂದಿಕೋಲಮಠ ಅವರನ್ನು ಸನ್ಮಾನಿಸಲಾಯಿತು.
ಬಸವಣ್ಣೆಯ್ಯ ಹಿರೇಮಠ ಸ್ವಾಗತಿಸಿದರು. ಶಿವನಗೌಡ ಪಾಟೀಲ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ತಾ.ಪಂ ಮಾಜಿ ಅಧ್ಯಕ್ಷ ಬಸವಣ್ಣೆಪ್ಪ ಚಿಂಚಲಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅರಣ್ಯದಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ರತ್ನಾಕರನಾಗಿದ್ದರು. ನಮ್ಮ ಪಾಪ ಕರ್ಮಗಳನ್ನು ನಾವೇ ಅನುಭವಿಸಬೇಕಾಗುವುದು. ಆ ಕರ್ಮದ ಫಲವನ್ನು ನಮ್ಮ ಕುಟುಂಬದವರೇ ಹಂಚಿಕೊಳ್ಳುವುದಿಲ್ಲ ಎಂದು ನಾರದ ಮಹರ್ಷಿಗಳು ರತ್ನಾಕರನಿಗೆ ದರ್ಶನ ನೀಡಿ ಮನವರಿಕೆ ಮಾಡಿಕೊಟ್ಟ ಬಳಿಕ, ಬೇಡನಾಗಿದ್ದ ರತ್ನಾಕರನು ವಿಶ್ವ ಪ್ರಸಿದ್ಧ ರಾಮಾಯಣ ಗ್ರಂಥವನ್ನು ಬರೆಯುವಂತಾದನು ಎಂದು ಹೇಳಿದರು.



