ವಿಜಯಸಾಕ್ಷಿ ಸುದ್ದಿ, ಗದಗ: ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಿ ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಗದಗ ಜಿಲ್ಲಾ ರೈತಪರ ಹೋರಾಟ ವೇದಿಕೆಯ ಸಂಚಾಲಕ ವೆಂಕಟೇಶ ಕುಲಕರ್ಣಿ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ ಕುಲಕರ್ಣಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಬಹುತೇಕ ತಾಲೂಕುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿಯನ್ನು ಬೆಳೆದಿದ್ದು, ಈಗ ಮಾರುಕಟ್ಟೆಯಲ್ಲಿ ಸರಿಯಾದ ದರ ಇಲ್ಲದೆ ತೀವ್ರ ಹಾನಿಯನ್ನು ಅನುಭವಿಸುತ್ತಿದ್ದೇವೆ. ಅತಿವೃಷ್ಟಿ, ರೋಗ ಬಾಧೆಗಳಿಂದ ನಿರೀಕ್ಷಿತ ಇಳುವರಿ ಬಂದಿಲ್ಲ. ಗೊಬ್ಬರ, ಬೀಜ, ಕ್ರಿಮಿನಾಶಕ, ಕಾರ್ಮಿಕರ ವೆಚ್ಚ ಹೆಚ್ಚಾಗಿರುವುದರಿಂದ ನಷ್ಟ ಅನುಭವಿಸುವ ಸಂಕಷ್ಟ ಪರಿಸ್ಥಿತಿಯಲ್ಲಿ ರೈತರು ನಲುಗುತ್ತಿದ್ದಾರೆ.
ಕೂಡಲೇ ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ರೈತರು ಬೆಳೆದ ಈರುಳ್ಳಿಗೆ ಬೆಂಬಲ ಬೆಲೆಯನ್ನು ನಿಗದಿ ಮಾಡಿ ಶೀಘ್ರವಾಗಿ ಖರೀದಿ ಕೇಂದ್ರವನ್ನು ಪ್ರಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅತಿವೃಷ್ಟಿಯಿಂದ ಬೆಳೆಹಾನಿ ಅನುಭವಿಸಿದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಕೂಡಲೇ ಮೆಕ್ಕೆಜೋಳ, ಹೆಸರು, ಶೇಂಗಾ ಮುಂತಾದ ರೈತ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆಗಳ ಮುಖಂಡರಾದ ಶಂಕರಗೌಡ ಜಯನಗೌಡರ, ಎನ್.ಎಮ್. ಸಿದ್ದೇಶ, ವೀರಣ್ಣ ಕಾಳಗಿ, ಬಸವರಾಜ, ಆದಪ್ಪ, ತಿಪ್ಪಣ್ಣ, ಸಿದ್ದಪ್ಪ ವಡ್ಡಟ್ಟಿ, ಮಲ್ಲಪ್ಪ ಮಠದ, ಬಸವರಾಜ ಪಲ್ಲೇದ, ಯಲ್ಲಪ್ಪ ಶಲವಡಿ, ಸಿದ್ದಪ್ಪ ಜಂಬಾಳಿ, ವಿಜಯ ಕೋಳೇಕಾರ, ಹುಚ್ಚೀರಪ್ಪ ಹೊಂಬಳ, ಪರಶುರಾಮಪ್ಪ ಹೊಂಬಳ, ನಾಗಪ್ಪ ಚಿಕರಡ್ಡಿ, ಬಸವರಾಜ ಕೋತಂಬ್ರಿ, ಶಂಭು ಪರದಿಗೌಡ್ರ, ಸೋಮಣ್ಣ ಆನಿ, ಈರಣ್ಣ ನಂದಿಗೋಡ, ಸೋಮನಗೌಡ ಕರಿಗೌಡ್ರ, ಲೋಹಿತಪ್ಪ ತಲಗೋಡಿ, ರಾಮನಗೌಡ ಮುಂತಾದವರಿದ್ದರು.