ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರದಲ್ಲಿ ಮನಕಲಕುವ ಘಟನೆಯೊಂದು ಜರುಗಿದ್ದು, ತಂದೆಯ ಸಾವಿನಿಂದ ಮನನೊಂದ ಮಗಳು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಜರುಗಿದೆ.
22 ವರ್ಷದ ಸ್ವರ್ಣ ಮೃತ ಮಗಳು. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡ್ತಿದ್ದ ಸ್ವರ್ಣ ಕಾಲೇಜಿನ ಹಾಸ್ಟೆಲ್ನಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಮನೆಗೆ ಬಂದಿದ್ದ ಮಗಳನ್ನ ತಾಯಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಳು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗಳು ಸ್ವರ್ಣ ಸಾವನ್ನಪ್ಪಿದ್ದಾಳೆ. ಈಕೆ ತಂದೆ ಕಳೆದ 3 ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಅಂದಿನಿಂದಲೂ ಮಾನಸಿಕವಾಗಿ ಕುಗ್ಗಿ ಹೋಗಿ ಕಿನ್ನೆತೆಗೆ ಓಳಗಾಗಿದ್ದ ಸ್ವರ್ಣ ಸೂಸೈಡ್ ಮಾಡಿಕೊಂಡು ಈಗ ತಂದೆಯ ಹಾದಿ ಹಿಡಿದಿದ್ದಾಳೆ.
ಇನ್ನೂ ಒಂದ್ಕಡೆ ಗಂಡ ಮತ್ತೊಂದ್ಕಡೆ ಮಗಳು ಆತ್ಮಹತ್ಯೆ ಹಾದಿ ಹಿಡಿದಿದ್ದು ಇರೋ ಮಗನೊಂದಿಗೆ ತಾಯಿ ದಿಕ್ಕು ತೋಚದಂತಾಗಿದ್ದಾರೆ. ಅಕ್ಕನ ಸಾವಿನಿಂದ ತಮ್ಮ ಸಹ ಕುಗ್ಗಿ ಹೋಗಿದ್ದು ತಾಯಿಗೆ ಆತಂಕ ಭಯ ಮೂಡಿಸಿದೆ.