ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳೆ ಹಾನಿ, ಬೆಳೆ ವಿಮೆ, ಖರೀದಿ ಕೇಂದ್ರ ತೆರೆಯುವ ಬೇಡಿಕೆ ಹಾಗೂ ಬೆಳೆ ಸಾಲ ಪಡೆದ ರೈತರಿಗೆ ಬ್ಯಾಂಕ್‌ಗಳಿಂದ ನೋಟಿಸ್ ಕಳುಹಿಸುತ್ತಿರುವದನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಯಲ್ಲಪ್ಪಗೌಡ ಕರಮಡಿ ಮಾತನಾಡಿ, ಜಿಲ್ಲೆಯಾದ್ಯಂತ ಬೆಳೆ ಸಮೀಕ್ಷೆ ಸಮರ್ಪಕವಾಗಿ ನಡೆಯದೆ ಅನೇಕ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಪ್ರತಿಯೊಬ್ಬ ರೈತನಿಗೂ ಕನಿಷ್ಠ 30 ಸಾವಿರ ರೂ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಹಿರೇಮಠ ಮಾತನಾಡಿ, ರೈತರ ಬೆಳೆ ವಿಮೆಯನ್ನು ತ್ವರಿತವಾಗಿ ಮಂಜೂರು ಮಾಡಬೇಕು ಹಾಗೂ ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಎಲ್ಲ ಬೆಳೆಗಳಿಗೆ ಖರೀದಿ ಕೇಂದ್ರಗಳನ್ನು ಶೀಘ್ರದಲ್ಲಿ ಆರಂಭಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಅಸುಂಡಿ, ಜಿಲ್ಲಾ ಗೌರವಾಧ್ಯಕ್ಷ ಮಹಾದೇವಗೌಡ ನೀಲಪ್ಪಗೌಡರ, ಜಿಲ್ಲಾ ಕಾರ್ಯದರ್ಶಿ ಟಾಕಪ್ಪ ಸಾತಪುತೆ, ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ, ಜಿಲ್ಲಾ ಯುವ ಪ್ರಮುಖ ಹಾಲಪ್ಪ ಶಿವಶೆಟ್ಟಿ, ಜಿಲ್ಲಾ ಖಜಾಂಚಿ ವೆಂಕಟೇಶ ಸೂರಣಗಿ, ಜಿಲ್ಲಾ ಸದಸ್ಯರಾದ ನಿಂಗಪ್ಪ ಬನ್ನಿಕೊಪ್ಪ, ರಾಜಶೇಖರ ಹಿರೇಮಠ, ಬಸವರಾಜ ಬೆಂತೂರ, ಡಿ.ಆರ್. ಪಾಟೀಲ, ಮಹಾಂತೇಶ್ ಶೋಗೋಟಿ, ವೆಂಕಟೇಶ್ ಪಾಟೀಲ, ಚಂದ್ರು ಹೂಗಾರ, ಪದ್ಮನಗೌಡ ಪಾಟೀಲ, ಪ್ರಭಾಕರ ಜಾಧವ, ಕೃಷ್ಣಪ್ಪ ಬಡಿಗೇರ, ಅರುಣ್ ಕಾರಭಾರಿ, ಸದಾನಂದ ಪೂಜಾರ, ಟಾಕಪ್ಪ ಲಮಾಣಿ, ಶೇಖಪ್ಪ ಲಮಾಣಿ, ರಾಮಪ್ಪ ಡಂಬಳ, ಚಂದ್ರು ಕಾರಭಾರಿ, ಪರಶುರಾಮ ಲಮಾಣಿ ಮುಂತಾದವರಿದ್ದರು.



