ದಾವಣಗೆರೆ:- ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಬಾಲಕನೊಬ್ಬ ಆಟ ಆಡುವಾಗ ಭದ್ರಾ ನಾಲೆಗೆ ಬಿದ್ದು ಕೊಚ್ಚಿಕೊಂಡು ಹೋದ ಘಟನೆ ಜರುಗಿದೆ.
Advertisement
ಮನೋಜ್ (9) ಮೃತ ಬಾಲಕ. ಬಾಲಕ 3ನೇ ತರಗತಿ ಓದುತ್ತಿದ್ದ ಎಂದು ತಿಳಿದು ಬಂದಿದೆ. ಬಾಲಕ ಆಟೋ ತೊಳೆಯಲೆಂದು ಸಂಬಂಧಿಯೊಬ್ಬರ ಜೊತೆ ನಾಲೆ ಬಳಿ ಬಂದಿದ್ದ. ಈ ವೇಳೆ ದುರಂತ ಸಂಭವಿಸಿದೆ. ಕೂಡಲೇ ಮಾಹಿತಿ ಆಧರಿಸಿ ಅಗ್ನಿಶಾಮಕದಳ ಹಾಗೂ ಈಜುಗಾರರು ಸ್ಥಳಕ್ಕೆ ಧಾವಿಸಿ ಮೃತದೇಹ ಪತ್ತೆ ಮಾಡಿದ್ದಾರೆ.
ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.