ಬೆಂಗಳೂರು:– ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ರೈಲು ಸಂಚಾರದಲ್ಲಿ ತಾಂತ್ರಿಕ ದೋಷದ ಹಿನ್ನಲೆಯಲ್ಲಿ ವ್ಯತ್ಯಯ ಉಂಟಾಗಿದೆ.
ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಸಂಚರಿಸುವ ಒಂದು ರೈಲಿನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ, ಮಾರ್ಗದ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ನಿಧಾನಗತಿಯದ್ದಾಗಿದೆ.
ಹೀಗಾಗಿ, ಪ್ರತಿ 19 ನಿಮಿಷಕ್ಕೊಮ್ಮೆ ಸಂಚರಿಸುತ್ತಿದ್ದ ರೈಲುಗಳು ಇದೀಗ ಪ್ರತಿ 25 ನಿಮಿಷಕ್ಕೊಮ್ಮೆ ಮಾತ್ರ ಓಡಾಡುತ್ತಿವೆ. ರೈಲುಗಳ ನಡುವಿನ ವಿಳಂಬ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಹಳದಿ ಮಾರ್ಗದಲ್ಲಿ ಸಂಚರಿಸುತ್ತಿದ್ದ 4 ರೈಲುಗಳಲ್ಲಿ ಒಂದು ತಾಂತ್ರಿಕ ದೋಷದ ಕಾರಣದಿಂದ ಸೇವೆಯಿಂದ ಹೊರಗುಳಿದಿದ್ದು, ಇತ್ತೀಚೆಗೆ ಕೇವಲ 3 ರೈಲುಗಳೇ ಓಡಾಟದಲ್ಲಿ ಇರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಅಧಿಕಾರಿಗಳು ತಿಳಿಸಿದ್ದಾರೆ.
BMRCL ತಾಂತ್ರಿಕ ತಂಡ ದೋಷ ನಿವಾರಣೆಗೆ ಕಾರ್ಯನಿರತವಾಗಿದ್ದು, ಶೀಘ್ರದಲ್ಲೇ ಮೆಟ್ರೋ ಸಂಚಾರವನ್ನು ಸಹಜ ಸ್ಥಿತಿಗೆ ತರಲು ಕ್ರಮ ಕೈಗೊಂಡಿದೆ.