ರಾಯಚೂರು: ಮಾಜಿ ಸಂಸದರು ಆಗಿರುವ ಪ್ರತಾಪ್ ಸಿಂಹ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ,” ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸರ್ಕಾರದ ಮೇಲೆ ಮಾಡಿದ ಕಮಿಷನ್ ಆರೋಪಕ್ಕೆ ತಿರುಗೇಟು ನೀಡಿದ ಯತೀಂದ್ರ, “ಅವರದೇ ಪಕ್ಷ ಕೂಡ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ, ನಾವೇಕೆ ತೆಗೆದುಕೊಳ್ಳಬೇಕು?” ಎಂದು ಪ್ರಶ್ನಿಸಿದರು.
ಸಿಎಂ ಔತಣಕೂಟದ ವೇಳೆ ಬಿಹಾರ ಚುನಾವಣೆಗಾಗಿ ಹಣ ಸಂಗ್ರಹ ಚರ್ಚೆ ನಡೆದಿದೆ ಎಂಬ ಆರ್. ಅಶೋಕ್ ಆರೋಪಕ್ಕೂ ತಿರುಗೇಟು ನೀಡಿದ ಯತೀಂದ್ರ, “ನಮ್ಮ ಪಕ್ಷದ ಒಳಚರಂಡಿ ವಿಚಾರಗಳು ಅವರಿಗೆ ಹೇಗೆ ಗೊತ್ತಾಗುತ್ತವೆ? ಅವರು ಏನಾದರೂ ಹೇಳುತ್ತಾರೆ, ಆದರೆ ಎಲ್ಲವೂ ನಿಜವಾಗುತ್ತದೆಯೇ?” ಎಂದು ಪ್ರಶ್ನಿಸಿದರು.
ಇನ್ನೂ ಸಿಎಂ ಸದಾ ಔತಣಕೂಟಗಳನ್ನು ಆಯೋಜಿಸುತ್ತಾರೆ. ಆ ಸಭೆಗಳಲ್ಲಿ ಚುನಾವಣೆಗಳ ವಿಷಯ ಸೇರಿದಂತೆ ಇತರ ಅಭಿವೃದ್ಧಿ ವಿಚಾರಗಳೂ ಚರ್ಚೆಯಾಗುತ್ತವೆ. ಬಿಹಾರ ಚುನಾವಣೆ ಬಗ್ಗೆಯೂ ಮಾತನಾಡುತ್ತಾರೆ. ಆದರೆ ಅದನ್ನು ರಾಜಕೀಯ ದೋಷಾರೋಪಣೆಗೆ ಬಳಸಬಾರದು.”
ಅಂತೆಯೇ, ಸಂಪುಟದಲ್ಲಿ ಸ್ಥಾನ ವಂಚನೆಯ ವಿಚಾರಕ್ಕೂ ಸ್ಪಷ್ಟನೆ ನೀಡಿದ ಅವರು, “ಸಿದ್ದರಾಮಯ್ಯ ಸಿಎಂ ಆಗಿರುವವರೆಗೂ ನಾನು ಮಂತ್ರಿಯಾಗುವುದಿಲ್ಲವೆಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ನನ್ನ ಮಂತ್ರಿತ್ವದ ಪ್ರಶ್ನೆ ಇನ್ನಿಲ್ಲ,” ಎಂದು ಹೇಳಿದ್ದಾರೆ.