ಬೆಂಗಳೂರು:- ಬೆಂಗಳೂರು ಹೊರವಲಯದ ಮೇಡಹಳ್ಳಿ ಬಳಿ ರಿಪೇರಿ ಮಾಡುತ್ತಿದ್ದ ವೇಳೆ ಕ್ರೇನ್ ತುಂಡಾಗಿ ಬಿದ್ದ ಪರಿಣಾಮ ಐವರು ಗಾಯಗೊಂಡಿದ್ದು, ಓರ್ವ ಗಂಭೀರ ಸ್ಥಿತಿಯಲ್ಲಿರುವ ಘಟನೆ ಜರುಗಿದೆ.
Advertisement
ಗಾಯಾಳುಗಳನ್ನು ಭಟ್ಟರಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೂಲೂ (30), ಕರ್ಬನ್ (19), ಇಲ್ಲಾಜ್ (38), ಸಮೀರ್ (28), ಶಾಮದೇವ್ (52) ಗಾಯಾಳುಗಳು. ಎಎಸ್ ಕ್ರೇನ್ ಸರ್ವೀಸ್ ವತಿಯಿಂದ ಅವಘಡ ಉಂಟಾಗಿದೆ. ಖಾಸಗಿ, ಜನ ವಸತಿ ಪ್ರದೇಶದಲ್ಲಿ ಕ್ರೇನ್ ರಿಪೇರಿ ಜಾಗವಿದ್ದು, ಕ್ರೇನ್ ರಿಪೇರಿ ಮಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಜನವಸತಿ ಪ್ರದೇಶದಲ್ಲಿ ಕ್ರೇನ್ ಸರ್ವಿಸ್ ಕಾರ್ಯ ಆರಂಭಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.