ಶಾಂತಿಯ ಭಾರತಕ್ಕಾಗಿ RSS ಬ್ಯಾನ್ ಅನಿವಾರ್ಯ: KPCC ವಕ್ತಾರ ಎಂ. ಲಕ್ಷ್ಮಣ್

0
Spread the love

ಮಡಿಕೇರಿ: KPCC ವಕ್ತಾರ ಎಂ. ಲಕ್ಷ್ಮಣ್ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್‌ ಸಂಘಟನೆಯನ್ನು ಬ್ಯಾನ್ ಮಾಡುವ ಬಗ್ಗೆ 100% ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

Advertisement

ಮಡಿಕೇರಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಂತಿಯ ಭಾರತಕ್ಕಾಗಿ RSS ಬ್ಯಾನ್ ಅನಿವಾರ್ಯ. ಡಿಕೆ ಶಿವಕುಮಾರ್ ಅವರು ಆರ್‌ಎಸ್‌ಎಸ್ ಸದಸ್ಯರನ್ನು ‘ಕರಿ ಟೋಪಿ’ ಎಂದು ಕರೆದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್‌ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸಂಘಟನೆ ಅಲ್ಲ, ಮಹಾತ್ಮ ಗಾಂಧಿಯವರ ವಿರುದ್ಧ ಹಿಂಸಾತ್ಮಕ ಕ್ರಮಗಳಲ್ಲಿ ಭಾಗಿಯಾಗಿರುವುದು ಸೇರಿದಂತೆ, ಕೆಲವು ನಂಬಿಕೆಗಳು ಮತ್ತು ಸಂಘರ್ಷಗಳನ್ನು ಹತ್ತಿಸುತ್ತಿರುವ ಸಂಘ ಎಂದು ಲಕ್ಷ್ಮಣ್ ಕಿಡಿಕಾರಿದ್ದಾರೆ.

ಚುನಾವಣೆಗಳನ್ನ ವೋಟ್‌ ಚೋರಿ ಮೂಲಕ ಗೆಲ್ಲುವಂತಹ ಕೆಲಸ ಮಾಡುತ್ತಿರುವುದೇ ಆರ್‌ಎಸ್‌ಎಸ್‌. ಅಂಥವರನ್ನ ಚಡ್ಡಿ, ಟೋಪಿ ಹಾಕಿರುವಂತಹ ವ್ಯಕ್ತಿಯನ್ನ ಕರಿಟೋಪಿ, ಕಳ್ಳ ಅಂತ ಕರೆದರೂ ಒಪ್ಪಿಕೊಳ್ತೇನೆ. ಇಡೀ ದೇಶವನ್ನ ಹಾಳು ಮಾಡ್ತಿರೋದೇ ಆರ್‌ಎಸ್‌ಎಸ್‌. ಇದು ತೊಲಗಬೇಕು ಅಂತ ರಾಹುಲ್‌ ಗಾಂಧಿ ಅವರು ದಿನನಿತ್ಯ ಹೋರಾಟ ಮಾಡ್ತಿದ್ದಾರೆ. ಅದೆಲ್ಲದಕ್ಕೂ ನಮ್ಮ ಬೆಂಬಲ ಇದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here