ಬಿಯರ್ ಬೆಲೆ ಏರಿಕೆ: ಮದ್ಯ ಪ್ರಿಯರಿಗೆ ಕಷ್ಟ, ಮಾರಾಟದಲ್ಲಿ 20% ಇಳಿಕೆ!

0
Spread the love

ಬೆಂಗಳೂರು:- ಕರ್ನಾಟಕದಲ್ಲಿ ಇತ್ತೀಚೆಗೆ ಮದ್ಯದ ಮಾರಾಟದಲ್ಲಿ ಭಾರೀ ಕುಸಿತ ಕಂಡು ಬಂದಿದೆ.

Advertisement

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮದ್ಯದ ಬೆಲೆ ಮೂರ್ನಾಲ್ಕು ಬಾರಿ ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ, ಕಳೆದ ಆರು ತಿಂಗಳಿಂದ ಮದ್ಯ ಮಾರಾಟದಲ್ಲಿ ಕುಸಿತವಾಗಿದ್ದು, 2024 ಮತ್ತು 2025 ರ ಅರ್ಧವಾರ್ಷಿಕ ಅಬಕಾರಿ ಇಲಾಖೆಯ ಡೇಟಾ ಈ ನಷ್ಟವನ್ನು ಸ್ಪಷ್ಟಪಡಿಸಿದೆ.

2023ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 352.83 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ದರೆ, 2024 ರಲ್ಲಿ 345.76 ಲಕ್ಷ ಬಾಕ್ಸ್​ಗೆ ಹಾಗೂ 2025 ರಲ್ಲಿ 342.93 ಲಕ್ಷ ಬಾಕ್ಸ್ ಮಾರಾಟಕ್ಕೆ ಇಳಿಕೆ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 2.83 ಲಕ್ಷ ಬಾಕ್ಸ್ ಮದ್ಯ ಮಾರಾಟದಲ್ಲಿ ಕುಸಿತವಾಗಿದೆ. ಮದ್ಯ ಮಾರಾಟಗಾರರ ಅಭಿಪ್ರಾಯ ಪ್ರಕಾರ, ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಳವೇ ಪ್ರಮುಖ ಕಾರಣ.

ಬಿಯರ್ ಮಾರಾಟದಲ್ಲಿ ಇನ್ನು ಹೆಚ್ಚು ಕುಸಿತವಾಗಿದೆ. 2024 ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 242.73 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು, 2025 ರಲ್ಲಿ 195.27 ಲಕ್ಷ ಬಾಕ್ಸ್‌ಗೆ ಇಳಿಕೆಯಾಗಿದೆ. ಇದು ಶೇ 19.55 ರಷ್ಟು ಕುಸಿತವಾಗಿದೆ. ಮದ್ಯಪ್ರಿಯರು ದರ ಏರಿಕೆಯಿಂದಾಗಿ ಮದ್ಯ ಸೇವನೆ ಕಡಿಮೆಯಾಗಿರುವುದನ್ನು ತಿಳಿಸಿದ್ದಾರೆ. ಬಿಯರ್ ಮೇಲಿನ ದರ ಇಳಿಕೆಯಾಗಬೇಕು ಎಂದು ಜನರಿಂದ ಆಗ್ರಹ ಕೇಳಿಬಂದಿದೆ.

ಈ ಕುಸಿತವು ಮದ್ಯ ಮಾರಾಟಗಾರರು ಮತ್ತು ಸರ್ಕಾರದ ಆದಾಯದಲ್ಲಿ ಪರಿಣಾಮ ಬೀರುತ್ತಿದೆ. ಮದ್ಯದ ಬೆಲೆ ಮತ್ತು ಸುಂಕ ನಿಖರವಾಗಿ ಸಮತೋಲನ ಸಾಧಿಸುವ ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here