ಬೆಂಗಳೂರು;-ಹಿರಿಯ ನಟ ರಾಜು ತಾಳಿಕೋಟೆ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸಂತಾಪ ಸೂಚಿಸಿದ್ದಾರೆ.
ಕನ್ನಡ ರಂಗಭೂಮಿಯ ಜನಪ್ರಿಯ ಕಲಾವಿದ ರಾಜು ತಾಳಿಕೋಟೆ ಅವರು ವಿಧಿವಶರಾದ ಸುದ್ದಿ ತೀವ್ರ ಆಘಾತ ಮೂಡಿಸಿದೆ. ರಂಗಭೂಮಿಗೆ ಮತ್ತು ಕನ್ನಡ ಚಲನಚಿತ್ರ ಇಂಡಸ್ಟ್ರಿಗೆ ಈ ಸಾವು ತುಂಬಲಾರದ ನಷ್ಟ ತಂದಿದೆ ಎಂದು ಹೇಳಿದ್ದಾರೆ.
ತಾಳಿಕೋಟೆ ಅವರು ಖಾಸ್ಗತೇಶ್ವರ ನಾಟಕ ಮಂಡಳಿಯ ಸ್ಥಾಪಕ ಮತ್ತು ಬಹುಮುಖ್ಯ ನಟರಾಗಿದ್ದವರು. ಅವರ ನಟನೆಯ ಪಂಚರಂಗಿ, ಮನಸಾರೆ ಚಲನಚಿತ್ರಗಳು ಅಪಾರ ಜನಪ್ರಿಯತೆ ಗಳಿಸಿವೆ. ಬಿಗ್‌ಬಾಸ್ ಕಾರ್ಯಕ್ರಮದ ಮೂಲಕ ಮನೆಮನೆಗೆ ಪರಿಚಿತರಾದ ಅವರು, ಕೇವಲ ಉತ್ತಮ ಕಲಾವಿದರಷ್ಟೇ ಅಲ್ಲದೇ ಒಳ್ಳೆಯ ವ್ಯಕ್ತಿಯಾಗಿಯೂ ಜನಪ್ರಿಯರಾಗಿದ್ದರು.
ರಾಜು ತಾಳಿಕೋಟೆ ಅವರ ಈ ಸಾವು ಕನ್ನಡ ರಂಗಭೂಮಿಗೆ ಆದ ದೊಡ್ಡ ನಷ್ಟ. ಅವರ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಹೊತ್ತಿಕೊಳ್ಳುವ ಶಕ್ತಿ ಕೊಡಲಿ” ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.