ಅ.22 ರಂದು ಶಬರಿಮಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

0
Spread the love

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಕ್ಟೋಬರ್ 22 ರಂದು ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

Advertisement

ಇದು ದೇವಾಲಯಕ್ಕೆ ಭೇಟಿ ನೀಡುವ ಭಾರತದ ಮೊದಲ ಹಾಲಿ ರಾಷ್ಟ್ರಪತಿಯ ಭೇಟಿ ಆಗಲಿದೆ. ಅವರು ಅ.21ರಂದು ತಿರುವನಂತಪುರಂಗೆ ಆಗಮಿಸಿ ರಾಜಭವನದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಮುಂದಿನ ದಿನ ನೀಲಕ್ಕಲ್‌ ಮೂಲಕ ಪಂಪಾಗೆ ತೆರಳಿ ಮಧ್ಯಾಹ್ನ ಅಯ್ಯಪ್ಪ ದರ್ಶನ ಮಾಡಲಿದ್ದಾರೆ.

ಅ.24ರವರೆಗೆ ಕೇರಳದಲ್ಲಿರುವ ಅವರು ತಿರುವನಂತಪುರಂ ಮತ್ತು ಕೊಟ್ಟಾಯಂನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.


Spread the love

LEAVE A REPLY

Please enter your comment!
Please enter your name here