ದಿಂಡಿಗಲ್:- ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆಯ ಘಟನೆ ನಡೆದಿದೆ. ಬೇರೆ ಜಾತಿಯವನೆಂದು ತನ್ನ ಅಳಿಯನನ್ನೇ ಮಾವ ಚಂದ್ರನ್ ಕತ್ತಿಯಿಂದ ಕೊಚ್ಚಿ ಕೊಂದಿದ್ದಾರೆ.
Advertisement
ರಾಮಚಂದ್ರನ್ (24) ಹೈನುಗಾರನಾಗಿದ್ದು, ಚಂದ್ರನ್ ಅವರ ಮಗಳು ಆರತಿ (21) ಜೊತೆ ಪ್ರೀತಿಸಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು. ಮದುವೆಗೆ ಆರತಿಯ ಮನೆಯವರು ವಿರೋಧಿಸಿದ್ದರು.
ಅಕ್ಟೋಬರ್ 13ರಂದು ಹಾಲು ಮಾರಲು ಹೋಗುತ್ತಿದ್ದ ರಾಮಚಂದ್ರನ್‌ರನ್ನು ಚಂದ್ರನ್ ದಾರಿಯಲ್ಲಿ ತಡೆದು, ಜಗಳದ ವೇಳೆ ಕೊಲೆ ಮಾಡಿದ್ದಾರೆ. ಮದುವೆಯಾದ ಮೂರೇ ತಿಂಗಳಲ್ಲಿ ರಾಮಚಂದ್ರನ್ ಸಾವನ್ನಪ್ಪಿದ್ದಾರೆ.
ಘಟನೆಯ ನಂತರ ಚಂದ್ರನ್ ಪೊಲೀಸರಿಗೆ ಶರಣಾಗಿದ್ದಾರೆ