ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಅಂಬೇಡ್ಕರರು ನೀಡಿರುವ ಸಂವಿಧಾನದಿಂದ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಖ್ಯಾತ ಸಾಹಿತಿ ಆರತಿ ಎಚ್.ಎನ್ ತಿಳಿಸಿದರು.
ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಖ್ಯಾತ ಲೇಖಕಿ ಕಮಲಾ ಹಂಪನಾರವರು ಪುತ್ರಿ, ಸಾಹಿತಿ ಆರತಿ ಎಚ್.ಎನ್ ಹಾಗೂ ರಾಜ್ಯ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಕೆ.ಉಚ್ಚಂಗೆಪ್ಪನವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆ. ಉಚ್ಚಂಗೆಪ್ಪ ಮಾತನಾಡಿ, ಸಾಹಿತಿ ಆರತಿಯವರು ಬಹುಮುಖ ಪ್ರತಿಭೆಯಾಗಿದ್ದಾರೆ. ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಉಳಿದ ಸಾಧಕರನ್ನು ದೂರದರ್ಶನ ವಾಹಿನಿಯ ಬೆಳಕು ಕಾರ್ಯಕ್ರಮದ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ್ ಮಾತನಾಡಿ, ಸಾಹಿತಿ ಆರತಿಯವರು ತಾಯಿಯವರಂತೆಯೇ ಸಾಮಾಜಿಕ ಕಳಕಳಿಯ, ಸಮಾಜದ ಪರಿವರ್ತನೆ ಮಾಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ವಿಜಯನಗರ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ, ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ, ಕಸಾಪ ಮಾಜಿ ಅಧ್ಯಕ್ಷೆ ಸುಭದ್ರಮ್ಮ, ಇಸ್ಮಾಯಿಲ್ ಎಲಿಗಾರ್, ರಾಜಶ್ರೀ ಮಾತನಾಡಿದರು.
ಈ ವೇಳೆ ಸಣ್ಣ ಹಾಲಸ್ವಾಮಿ ಹರಪನಹಳ್ಳಿ, ಮುಖಂಡರಾದ ಎಚ್.ಬಿ. ಪರಶುರಾಮಪ್ಪ, ಆರ್ ಲೋಕೇಶ್, ಬಿ.ಎಚ್. ಬಸರಾಜಪ್ಪ, ಮುತ್ತಿಗಿ ಜಂಬಣ್ಣ, ಚಿಗಟೇರಿ ಜಂಬಣ್ಣ, ರೇವಣಸಿದ್ದಪ್ಪ, ಎಚ್.ಕೆ. ಮಂಜುನಾಥ, ಎಚ್.ಕೆ. ರೇಖಾ, ಅಂಜಿನಪ್ಪ, ಎಚ್.ಕೆ. ವರುಣ್, ಮತ್ತಿಹಳ್ಳಿ ಬೆಟ್ಟನಗೌಡ, ಹಾಲೇಶ್ ನಾಯ್ಕ, ವಾಗೀಶ್, ವಕೀಲ ಅಹ್ಮದ್, ಗಿಡ್ಡಳ್ಳಿ ನಾಗರಾಜ, ಪಿ. ಪರಶುರಾಮ್, ಜಗದೀಶ್, ಪ್ರಕಾಶ್ ನಾಯ್ಕ ಮುಂತಾದವರು ಇದ್ದರು.