ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲಗಂಗಾಧರ ತಿಲಕ್ ಪಾರ್ಕ್ನಲ್ಲಿ ಭಗತಸಿಂಗ್ ಅಭಿಮಾನಿ ಬಳಗದಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ನವೆಂಬರ್ 9ರಂದು ಕನ್ನಡ ರಾಜ್ಯೋತ್ಸವ ಮತ್ತು ಭಗತಸಿಂಗ್ ಜಯಂತ್ಯೋತ್ಸವವನ್ನು ಆಚರಣೆ ಮಾಡಲು ನಿರ್ಧರಿಸಲಾಯಿತು.
ಬಳಗದ ಜಿಲ್ಲಾ ಪ್ರಮುಖರಾದ ಮಂಜುನಾಥ (ಸೋಮು) ಬ. ಮುಳಗುಂದ ಮಾತನಾಡಿ, ಕನ್ನಡ ರಾಜ್ಯೋತ್ಸವ ಹಾಗೂ ಭಗತಸಿಂಗ್ ಜಯಂತ್ಯೋತ್ಸವದ ಅಂಗವಾಗಿ ಸಮಿತಿಯನ್ನು ರಚಿಸಲು ಸಲಹೆ-ಸೂಚನೆ ನೀಡಿದರು.
ಸಭೆಯಲ್ಲಿ ಎಲ್ಲ ಸದಸ್ಯರ ಸಮ್ಮತಿಯಿಂದ 2025ರ ಸಮಿತಿಯನ್ನು ರಚನೆ ಮಾಡಲಾಯಿತು. ಸಮಿತಿಯ ಅಧ್ಯಕ್ಷರಾಗಿ ಮಂಜುನಾಥ ಹುಡೇದ, ಗೌರವಾಧ್ಯಕ್ಷರಾಗಿ ಬಸವರಾಜ ಗುಡದೂರ, ಉಪಾಧ್ಯಕ್ಷರಾಗಿ ಶಿವಣ್ಣ ಬಿ. ಎಂ, ಮಹಾಂತೇಶ ಬಿ. ಕೆ, ಕಾರ್ಯದರ್ಶಿಯಾಗಿ ಸಾಲಿಮಠ ಆರ್. ಬಿ, ಸಹ ಕಾರ್ಯದರ್ಶಿಯಾಗಿ ವಾಲ್ಮೀಕಿ ಸಿ. ಎಚ್, ಮಹಾಂತೇಶ ಎನ್. ಎಚ್, ಮಂಜು ಎಂ. ಎಸ್, ಖಜಾಂಚಿಯಾಗಿ ನಾಗರಾಜ ಟಿ. ಜಿ, ನವಲಿಮಠ ಎಂ. ಎ. , ಸದಸ್ಯರಾಗಿ ಪರಶು ಜಿ, ಅಮಿತ ವಿ. ಎಚ್, ಕುಂಬಾರ ಬಿ. ಎಸ್, ಮಹಾಂತೇಶ ಎನ್. ಪಿ, ಕಿರಣ ಎಂ, ವಿನಾಯಕ ಜಿ, ಮಹೇಶ್ ಎಚ್, ಸಂತೋಷ ಬಿ, ವಿಷ್ಣು ಆರ್. ಎ ಅವರನ್ನು ನೇಮಿಸಲಾಯಿತು.
ಕಾರ್ಯಕ್ರಮದ ನಿಮಿತ್ತ ಅನ್ನಸಂತರ್ಪಣೆ, ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ, ವೇದಿಕೆ ಕಾರ್ಯಕ್ರಮ, ದೇಶಭಕ್ತಿ ಹಾಗೂ ನಾಡಭಕ್ತಿ ಗೀತೆಗಳು, ಸ್ವಾಮೀಜಿಗಳನ್ನು, ವೀರಯೋಧರನ್ನು, ಗಣ್ಯರನ್ನು ಆಹ್ವಾನಿಸಿ, ಕಾರ್ಯಕ್ರಮ ಏರ್ಪಡಿಸಲು ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ರವಿ ಹುಡೇದ, ಮಂಜುನಾಥ ಹಿತ್ತಲನಿ, ಅಭಿಷೇಕ, ಕಾರ್ತಿಕ, ವಿನಾಯಕ, ಈಶ್ವರ, ಸುನೀಲ, ವಿನಯ, ರಾಜು, ಪ್ರಕಾಶ, ಬಸು, ಮಂಜು, ಕಿರಣ, ಚೇತನ, ಸತೀಶ, ಸಂತೋಷ ಮುಂತಾದವರು ಪಾಲ್ಗೊಂಡಿದ್ದರು.



