ಸರಿಗಮಪ ರಿಯಾಲಿಟಿ ಶೋ ಮೂಲಕ ಖ್ಯಾತಿ ಘಳಿಸಿದ ಗಾಯಕಿ ಸುಹಾನ ಸೈಯದ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಸುಹಾನ ಹಾಗೂ ನಿತಿನ್ ಇದೀಗ ಕುವೆಂಪು ಆಶಯದಂತೆ ಹಸೆಮಣೆ ಏರಲಿದ್ದಾರೆ.
ಸುಹಾನ ಹಾಗೂ ನಿತಿನ್ ಅವರದ್ದು ಅಂತರ್ ಧರ್ಮೀಯ ವಿವಾಹವಾಗಿದ್ದು, ಕುವೆಂಪು ಮಂತ್ರ ಮಾಂಗಲ್ಯದ ಆಶಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಾಳೆ ಕನಕಪುರದ ಖಾಸಗೀ ರೆಸಾರ್ಟ್ನಲ್ಲಿ ಮದುವೆ ಆಗುತ್ತಿದ್ದಾರೆ.
ಪ್ರೀತಿ ವಿಶ್ವದ ಭಾಷೆ
ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ
ದೇವರ ವಿರಚಿತ
ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ
ಆಶಯದಂತೆ ಜೊತೆಯಾಗಲಿರುವ
ಸುಹಾನ ಮತ್ತು ನಿತಿನ್
ನಮ್ಮ ನಡೆ ವಿಶ್ವಮಾನವತ್ವದೆಡೆ
ಸಹೃದಯಿಗಳೇ,
ಬನ್ನಿ, ಹರಸಿ, ಆಶೀರ್ವದಿಸಿ..
ಇತ್ತೀಚೆಗಷ್ಟೇ ಸುಹಾನಾ ತಮ್ಮ ಪ್ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಸುಹಾನಾ ಮದುವೆ ಆಗ್ತಿರೋ ಹುಡುಗ ನಿತಿನ್ ಶಿವಾಂಶ್. ರಂಗಭೂಮಿ ಕಲಾವಿದರು. ಪ್ರಸಿದ್ಧ ರಂಗ ತರಬೇತಿ ಕೇಂದ್ರ ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ಇವರದ್ದು ಪ್ರೇಮ ವಿವಾಹವಾಗಿದ್ದು 16 ವರ್ಷಗಳ ಸುದೀರ್ಘ ಸ್ನೇಹ ಪ್ರೀತಿ ಇದೀಗ ಮದುವೆಯ ಮೂಲಕ ಒಂದಾಗುತ್ತಿದೆ.