ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ನಡೆದ ಅಂಜುಮನ್-ಏ-ಇಸ್ಲಾಮ್ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತದಾರರಿಗೆ, ಸಮಾಜದ ಮುಖಂಡರಿಗೆ ಹಾಗೂ ಉಲ್ಮಾಗಳಿಗೆ ಕೃತಜ್ಞತಾ ಸಮಾರಂಭವನ್ನು ಹಮ್ಮಿಕೊಂಡಿದ್ದರು.
ಸಭೆಯಲ್ಲಿ ಭಾಷಾಸಾಬ ಮಲ್ಲಸಮುದ್ರ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಸಮಾಜದ ಹಿತ ಕಾಪಾಡುವುದು ಮತ್ತು ಸಮಾಜ ಕಟ್ಟುವ ಮನಸ್ಸುಗಳು ಅತೀ ಅವಶ್ಯಕವಾಗಿದೆ ಎಂದು ಹೇಳಿದರು. “ನಮ್ಮ ಮುಸ್ಲಿಂ ಸಮಾಜದ ಎಲ್ಲಾ ಮುಖಂಡರಿಗೆ ಕೃತಜ್ಞತೆ ತಿಳಿಸಲು ನನ್ನ ಎಲ್ಲಾ ಅಭ್ಯರ್ಥಿಗಳ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದರು.
ವೇದಿಕೆಯ ಮೇಲೆ ಜನಾಬ್ ಜಾಕೀರ್ ಮುಜಾವರ, ಜೀವನಸಾಬ ನಮಾಜಿ, ಎಮ್.ಎಮ್. ಮಾಳೇಕೂಪ್ಪ, ಮೈಬೂಬ ನದಾಫ್ ಕಾಗದರ, ಯೂಸೂಪ ನಮಾಜಿ, ಮಹ್ಮದದಲ್ಲಿ ಕಾತಾಳ, ಚಾಂದ ಕೂಟ್ಟುರ, ಸೈಯದ್ ಖಾಲಿದ ಕೊಪ್ಪಳ, ರಿಯಾಜ್ ಬ್ಯಾಳಿ ರೊಟ್ಟಿ, ಯುಸೂಫ್ಸಾಬ ನಮಾಜಿ, ಮುಸ್ಲಿಂ ಸಮಾಜದ ಧರ್ಮಗುರುಗಳಾದ ಜನಾಬ್ ಇನಾಯಿತುಲ್ಲಾ ಫೀರಜಾದೆ ಮುಫ್ತಿ ಆರಿಫ್ ಧಾರವಾಡ, ಜನಾಬ್ ಅಬ್ದುಲ್ ರಹೀಮ್ ಸಾಬ್ ಚಂದೂನವರ, ಜನಾಬ್ ಮಾಲಾನಾ ಅಬ್ದುಲ್ ಗಪೂರಸಾಬ್ ಪಲ್ಲೇದ್ ಮುಂತಾದವರು ಇದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಇನಾಯಿತುಲ್ಲಾ ಪೀರಜಾದೆ, ಜನಾಬ್ ಮಾಲಾನಾ ಅಬ್ದುಲ್ ಗಪುರ್, ಜನಾಬ್ ಜಾಕೀರ ಮುಜಾವರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಲ್ ಮದಿನಾ ಗ್ರೂಪಿನ ಸದಸ್ಯರಾದ ಆಸೀಫ್ ದಂಡಿನ್, ಬಾಬು ನರಸಾಪುರ, ಬಶೀರಸಾಬ್ ಸಂಕನಾಳ, ದಾವಲಸಾಬ್ ಮಲ್ಲಸಮುದ್ರ, ಕರೀಮಸಾಬ್ ಸುಣಗಾರ, ಮೆಹಬೂಬ್ ಹುನಗುಂದ, ಮೆಹಬೂಬ ಬಾಷಾ ಗಡಾದ, ಸಾಧಿಕ್ ಬುಡ್ಡೇಸಾಬ್ ನರೇಗಲ್ಲ, ಶಾಕೀರ ಕಾತರಕಿ, ಸುಲೇಮಾನ ಮಾಳೇಕೊಪ್ಪ, ಯುಸೂಫ್ಸಾಬ್ ಕೊಟ್ಟೂರ ಮುಂತಾದವರು ಉಪಸ್ಥಿತರಿದ್ದರು.