ಬೆಂಗಳೂರು: ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಸನ್ನಿವೇಶದಿಂದ ಬೆಂಗಳೂರಿನ ಕೆಆರ್ ಮಾರ್ಕೆಟ್ ಜನಸಾಗರದಿಂದ ಕಿಕ್ಕಿರಿದಿದೆ.
Advertisement
ಬೆಳಗ್ಗೆಯೇ ಹೂ, ಹಣ್ಣು ಖರೀದಿಗೆ ಜನರು ಮುಗಿಬಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ಸತತ ಮಳೆಯಿಂದ ಹೂ ಬೆಲೆ ಏರಿಕೆಯಾದರೂ ಖರೀದಿದಾರರ ಉತ್ಸಾಹ ಕಡಿಮೆಯಾಗಿಲ್ಲ. ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಚೆಂಡು ಹೂಗಳ ಬೇಡಿಕೆ ಹೆಚ್ಚಾಗಿದೆ.
ಹೂಗಳ ದರ (ಪ್ರತಿ ಕೆ.ಜಿ):
ಕನಕಾಂಬರ – ₹1,300–₹1,600
ಮಲ್ಲಿಗೆ – ₹700–₹900
ಕಾಕಡ – ₹700–₹800
ಸೇವಂತಿಗೆ – ₹800
ಗುಲಾಬಿ, ಕಣಗಲೆ, ಸುಗಂಧರಾಜ – ₹500
ತಾವರೆ ಜೋಡಿ – ₹150
ಬಾಳೆಕಂದು – ₹150