ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವರಾಜಪುರ ಬಳಿ ವಿಚಿತ್ರ ಘಟನೆ ನಡೆದಿದೆ.
Advertisement
ರಸ್ತೆ ಮಧ್ಯೆ ನಿಂತು “ಹಿಂದೂಗಳನ್ನು ಬಾಂಬ್ ಹಾಕಿ ಸಾಯಿಸುತ್ತೇನೆ” ಎಂದು ಕೂಗಿದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆ ವ್ಯಕ್ತಿಯ ಹೆಸರು ಮೊಹ್ಮದ್ ಖಾಲೀದ್ (50). ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವರು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಖಾಲೀದ್ ಕುಟುಂಬದವರ ಪ್ರಕಾರ ಅವರು ಮಾನಸಿಕ ಅಸ್ವಸ್ಥರು ಎಂದು ಹೇಳಲಾಗಿದೆ. ಪ್ರಸ್ತುತ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.