ಬೆಂಗಳೂರು: ಮಡಿವಾಳದ ಲಾಡ್ಜ್‌ನಲ್ಲಿ ಪ್ರೇಯಸಿಯ ಜೊತೆ 7 ದಿನ ಕಳೆದಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಯುವಕ ಹೆಚ್ಚು ಮಾತ್ರೆ ಸೇವಿಸಿದ್ದರಿಂದ ಮೃತಪಟ್ಟಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಮೃತ ಯುವಕನನ್ನು ತಕ್ಷಿತ್ (20) ಎಂದು ಗುರುತಿಸಲಾಗಿದೆ. ತಕ್ಷಿತ್ ತನ್ನ ಲವ್ವರ್ ಜೊತೆ ಮಡಿವಾಳದ ಲಾಡ್ಜ್‌ನಲ್ಲಿ ರೂಮ್ ಬುಕ್ ಮಾಡಿಕೊಂಡು ಕಳೆದ ವಾರದಿಂದ ವಾಸಿಸುತ್ತಿದ್ದ.
ಗುರುವಾರ ಯುವತಿಯ ಆರೋಗ್ಯ ಏರುಪೇರುಗೊಂಡ ಕಾರಣ ಆಕೆ ವಿರಾಜಪೇಟೆಗೆ ತೆರಳಿದ್ದಳು. ಆಕೆ ಹೋದ ಮರುದಿನ ಬೆಳಿಗ್ಗೆ ಲಾಡ್ಜ್ ಸಿಬ್ಬಂದಿ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಬರದೆ, ಬಾಗಿಲು ತೆರೆದಾಗ ತಕ್ಷಿತ್ ಮೃತಪಟ್ಟಿರುವುದು ಪತ್ತೆಯಾಯಿತು.
ಪೋಲೀಸರು ಈ ಪ್ರಕರಣವನ್ನು ಅನುಮಾನಾಸ್ಪದ ಸಾವಿನಂತೆ ದಾಖಲಿಸಿದ್ದು, ನಿಖರ ಸಾವಿನ ಕಾರಣ ಪತ್ತೆ ಹಚ್ಚಲು ಲಿವರ್, ಜಠರ, ರಕ್ತದ ಮಾದರಿ ಹಾಗೂ ಇತರ ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಮಾತ್ರ ಸ್ಪಷ್ಟತೆ ಸಿಗಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.