ಸೇವೆಗೆ ಸಿಹಿ ಪ್ರತಿಫಲ: ಡೆಲಿವರಿ ಬಾಯ್ಸ್ʼಗಳಿಗೆ ಉಡುಗೊರೆ ನೀಡಿದ ಯುವಕ

0
Spread the love

ಹೈದರಾಬಾದ್‌:- ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಎಲ್ಲರೂ ತಮ್ಮ ಕುಟುಂಬದೊಂದಿಗೆ ಖುಷಿಪಡುತ್ತಿದ್ದರೂ, ಕೆಲವರು ತಮ್ಮ ಕರ್ತವ್ಯಕ್ಕಾಗಿ ಹಬ್ಬವನ್ನೇ ತ್ಯಜಿಸಿ ದುಡಿಯುತ್ತಾರೆ. ಅಂಥವರಲ್ಲಿ ಡೆಲಿವರಿ ಬಾಯ್ಸ್‌ ಕೂಡ ಒಬ್ಬರು.

Advertisement

ಈ ಹಿನ್ನಲೆಯಲ್ಲಿ ಹೈದರಾಬಾದ್‌ನ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಗುಂಡೇಟಿ ಮಹೇಂಧರ್ ರೆಡ್ಡಿ ಅವರು ಮಾನವೀಯತೆ ಮೆರೆದಿದ್ದಾರೆ. ಸ್ವಿಗ್ಗಿ, ಬ್ಲಿಂಕಿಟ್, ಜೆಪ್ಟೋ ಹಾಗೂ ಬಿಗ್‌ಬಾಸ್ಕೆಟ್ ಮೂಲಕ ಸಿಹಿತಿಂಡಿಗಳನ್ನು ಆರ್ಡರ್ ಮಾಡಿ, ಮನೆ ಬಾಗಿಲಿಗೆ ಬಂದ ಡೆಲಿವರಿ ಬಾಯ್ಸ್‌ಗಳಿಗೆ ಅದನ್ನೇ ಉಡುಗೊರೆಯಾಗಿ ನೀಡಿ ದೀಪಾವಳಿ ಶುಭಾಶಯ ಕೋರಿದ್ದಾರೆ.

ಈ ಘಟನೆಯ ವೀಡಿಯೋವನ್ನು ರೆಡ್ಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, “ಈ ದೀಪಾವಳಿಗೆ ನಮ್ಮ ಡೆಲಿವರಿಗಳನ್ನು ಸಿಹಿಗೊಳಿಸೋಣ” ಎಂದು ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ರೆಡ್ಡಿಯವರ ಮಾನವೀಯತೆ ಮೆಚ್ಚಿಕೊಂಡು “ನಿಜವಾದ ದೀಪಾವಳಿ ಹೀಗೆ ಇರಬೇಕು” ಎಂದು ಪ್ರಶಂಸಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here