ಛತ್ತೀಸ್ಗಢ:- ಛತ್ತೀಸ್‌ಗಢದ ಒಂದು ಗ್ರಾಮದಲ್ಲಿ ಮದುವೆಯ ಸಂಭ್ರಮ ದುರ್ಘಟನೆಯಾಗಿ ಮಾರ್ಪಟ್ಟಿದೆ.
Advertisement
ಮದುವೆಯಾದ ಕೇವಲ 24 ಗಂಟೆಗಳಲ್ಲೇ, ವಧುವಿನ ಸೋದರಸಂಬಂಧಿ ನೀರಜ್ ಠಾಕೂರ್ ಅವರನ್ನು ಗರ್ಭಿಣಿ ಪತ್ನಿಯ ಎದುರೇ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಪೂಜಾ ಮತ್ತು ತಿಲಕ್ ಸಾಹು ಕುಟುಂಬದ ಒಪ್ಪಿಗೆಯಿಲ್ಲದೆ ದೇವಸ್ಥಾನದಲ್ಲಿ ವಿವಾಹವಾದರು. ಈ ವಿಚಾರ ತಿಳಿದ ಕೂಡಲೇ ಎರಡೂ ಕುಟುಂಬಗಳ ನಡುವೆ ಜಗಳ ಶುರುವಾಯಿತು. ಮಧ್ಯಪ್ರವೇಶಿಸಿ ಜಗಳ ಶಮನಗೊಳಿಸಲು ಪ್ರಯತ್ನಿಸಿದ ನೀರಜ್ ಠಾಕೂರ್ ಮೇಲೆ ತಿಲಕ್‌ನ ಸ್ನೇಹಿತರು ದೊಣ್ಣೆ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದರು.
ಗಂಭೀರ ಗಾಯಗೊಂಡ ಠಾಕೂರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಅಲ್ಲಿ ಪ್ರಾಣ ಬಿಟ್ಟರು. ಈ ಪ್ರಕರಣದಲ್ಲಿ ಮೂವರು ಬಾಲ ಅಪರಾಧಿಗಳು ಸೇರಿ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.